ದೇಶ

ಸರ್ಕಾರದ ಕ್ರಮದ ಫಲಿತಾಂಶ: 14 ವರ್ಷಗಳಿಂದ ಕಾಣೆಯಾಗಿದ್ದ ಬಾಲಕಿ ಮರಳಿ ಮನೆಗೆ

Srinivas Rao BV

ರಾಂಚಿ: 14 ವರ್ಷಗಳಿಂದ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಜಾರ್ಖಂಡ್ ಸರ್ಕಾರದ ಕ್ರಮಗಳಿಂದಾಗಿ ಮರಳಿ ಮನೆಗೆ ಸೇರಿದ್ದಾಳೆ. 

ಗುಮ್ಲಾದ ಕಿತಮ್ ಗ್ರಾಮದ ಜಯಂತಿ ಲಕ್ರಾ ಮನೆಗೆ ಮರಳಿರುವ ಬಾಲಕಿಯಾಗಿದ್ದು ಈಕೆ ತನ್ನ ಗ್ರಾಮದಿಂದ 14 ವರ್ಷಗಳಿಂದ ನಾಪತ್ತೆಯಾಗಿದ್ದಳು.

ಸಂತ ಅನ್ನ ಚೈನಾಪುರದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಜಯಂತಿ ನಾಪತ್ತೆಯಾಗಿದ್ದರು. 

ಜಾರ್ಖಂಡ್ ನ ಬಾಲಕಿ ಪಂಜಾಬ್ ನಲ್ಲಿರುವುದರ ಬಗ್ಗೆ ಮಾಹಿತಿ ಪಡೆದ ಸಿಎಂ ಹೆಮಂತ್ ಸೊರೆನ್ ಆಕೆಯನ್ನು ಪುನಃ ಮನೆಗೆ ಸೇರಿಸುವುದಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಇದರ ಭಾಗವಾಗಿ ಸಿಎಂ ಕಾರ್ಮಿಕ ಇಲಾಖೆಯ ರಾಜ್ಯ ವಲಸಿಗ ಕಂಟ್ರೋಲ್ ರೂಮ್ ಗೆ ಸೂಚನೆಗಳನ್ನು ನೀಡಿದ್ದಾರೆ. ಇಲಾಖೆ ಕಾರ್ಯಪ್ರವೃತ್ತವಾದ ಪರಿಣಾಮ ಬಾಲಕಿ ತನ್ನ ಪೋಷಕರೊಂದಿಗೆ ಗ್ರಾಮಕ್ಕೆ ವಾಪಸ್ಸಾಗಿದ್ದಾಳೆ.

ಕಿತಮ್ ಗ್ರಾಮದ ಮೂಲದ ಈಕೆ ನಾಪತ್ತೆಗೂ ಮುನ್ನ ಸಂತ್ ಅನ್ನಾ ಚೈನ್ಪುರ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು.

ಪಂಜಾಬ್ ತಲುಪಿದ್ದ ಈ ಬಾಲಕಿ ಅಲ್ಲಿನ ಗುರು ನಾನಕ್ ವೃದ್ಧಾಶ್ರಮದಲ್ಲಿ ಕೆಲವು ಸಮಯ ಆಶ್ರಯ ಪಡೆದಿದ್ದಳು. ಈ ಮಾಹಿತಿ ರಾಜ್ಯ ವಲಸಿಗ ಕಂಟ್ರೋಲ್ ರೂಮ್ ಗೆ ಸೆ.09 ರಂದು ತಲುಪಿತ್ತು.

SCROLL FOR NEXT