ದೇಶ

ಮಮತಾ ಬ್ಯಾನರ್ಜಿ ಸಂಪುಟ ವಿಸ್ತರಣೆ: ಬಾಬುಲ್ ಸುಪ್ರಿಯೊ ಸೇರಿ 9 ಶಾಸಕರು ಸಚಿವರಾಗಿ ಪ್ರಮಾಣ

Lingaraj Badiger

ಕೊಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 2011ರಲ್ಲಿ ಪಕ್ಷವು ಅಧಿಕಾರಕ್ಕೆ ಬಂದ ನಂತರ ಅತಿದೊಡ್ಡ ಸಂಪುಟ ಎಂದು ಬಿಂಬಿತವಾಗಿದೆ. ಇಂದು ಕ್ಯಾಬಿನೆಟ್ ಗೆ ಐದು ಹೊಸ ಮುಖಗಳು ಸೇರಿದಂತೆ 9 ಮಂದಿಯನ್ನ ಸೇರಿಸಿಕೊಳ್ಳಲಾಗಿದೆ.

ಬಾಬುಲ್ ಸುಪ್ರಿಯೊ ಸೇರಿದಂತೆ 9 ಶಾಸಕರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿಯ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರು ಕಳೆದ ವರ್ಷ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

ಬಾಬುಲ್ ಸುಪ್ರಿಯೊ ಅವರೊಂದಿಗೆ ಸ್ನೇಹಶಿಶ್ ಚಕ್ರವರ್ತಿ, ಪಾರ್ಥ ಭೌಮಿಕ್, ಉದಯನ್ ಗುಹಾ ಮತ್ತು ಪ್ರದೀಪ್ ಮಜುಂದಾರ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ನಾಲ್ವರು ಕಿರಿಯ ಮಂತ್ರಿಗಳಾಗಿ ಬಿರ್ಬಹಾ ಹನ್ಸ್ದಾ, ಬಿಪ್ಲಬ್ ರಾಯ್ ಚೌಧರಿ, ತಜ್ಮುಲ್ ಹೊಸೈನ್ ಮತ್ತು ಸತ್ಯಜಿತ್ ಬರ್ಮನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಆಪ್ತ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದ ಕೆಲವು ದಿನಗಳ ನಂತರ ಐವರು ಹೊಸ ಸಚಿವರೊಂದಿಗೆ 9 ಮಂದಿ ಇಂದು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದರು.

ಪಾರ್ಥ ಚಟರ್ಜಿ ಬಂಧನದ ನಂತರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅವರು ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮಗಳು ಮತ್ತು ಸಂಸದೀಯ ವ್ಯವಹಾರಗಳು ಸೇರಿದಂತೆ ಐದು ಪ್ರಮುಖ ಖಾತೆಗಳನ್ನು ಹೊಂದಿದ್ದರು.

SCROLL FOR NEXT