ದೇಶ

ಐಐಟಿಗಳಲ್ಲಿ 4500ಕ್ಕೂ ಹೆಚ್ಚು ಉಪನ್ಯಾಸಕರ ಹುದ್ದೆ ಖಾಲಿ

Lingaraj Badiger

ನವದೆಹಲಿ: ಖರಗ್‌ಪುರ, ಬಾಂಬೆ ಮತ್ತು ಮದ್ರಾಸ್ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳೆಂದು ಕರೆಯಲ್ಪಡುವ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಗಳಲ್ಲಿ 4,500 ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇವೆ.

ಮಿಷನ್ ಮೋಡ್‌ನಲ್ಲಿ ನಿರ್ದಿಷ್ಟ ನೇಮಕಾತಿ ಡ್ರೈವ್ ಮೂಲಕ ಉಪನ್ಯಾಸಕರ ಕೇಡರ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಎಲ್ಲಾ ಐಐಟಿಗಳಿಗೆ ಸೂಚಿಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ. ಹೆಚ್ಚಿನವರು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.

ಶಿಕ್ಷಣ ಸಚಿವಾಲಯದ ಪ್ರಕಾರ, ಭಾರತದಲ್ಲಿನ 23 ಐಐಟಿಗಳಲ್ಲಿ 4,596 ಅಧ್ಯಾಪಕರ ಹುದ್ದೆಗಳು ಖಾಲಿ ಇವೆ.

ಐಐಟಿ ಖರಗ್‌ಪುರದಲ್ಲಿ 798 ಬೋಧಕ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ, ಬಾಂಬೆಯಲ್ಲಿ 517 ಹುದ್ದೆಗಳು ಖಾಲಿಯಿದ್ದರೆ, ಮದ್ರಾಸ್‌ನಲ್ಲಿ 482 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

ಲಿಖಿತ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಖಾತೆ ರಾಜ್ಯ ಸಚಿವ ಡಾ.ಸುಭಾಸ್ ಸರ್ಕಾರ್ ಅವರು, ಐಐಟಿಗಳು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಕ್ಟ್, 1961 ರ ಅಡಿಯಲ್ಲಿ ಆಡಳಿತ ನಡೆಸುವ ಸ್ವಾಯತ್ತ ಸಂಸ್ಥೆಗಳಾಗಿವೆ ಎಂದು ತಿಳಿಸಿದರು.

SCROLL FOR NEXT