ದೇಶ

ರಾಜ್ಯಗಳ ವಿರುದ್ಧ ಕೇಂದ್ರದ 'ತಾರತಮ್ಯ' ಪ್ರತಿಭಟಿಸಿ ನೀತಿ ಆಯೋಗ ಸಭೆಗೆ ಕೆಸಿಆರ್ ಬಹಿಷ್ಕಾರ 

Nagaraja AB

ಹೈದರಾಬಾದ್: ರಾಜ್ಯಗಳ ವಿರುದ್ಧ ಕೇಂದ್ರದ ತಾರತಮ್ಯ' ಧೋರಣೆ ವಿರೋಧಿಸಿ ತೀವ್ರ ಪ್ರತಿಭಟನೆಯ ಸಂಕೇತವಾಗಿ ಆಗಸ್ಟ್ 7 ರಂದು ನಡೆಯಲಿರುವ ನೀತಿ ಆಯೋಗದ 7 ನೇ ಆಡಳಿತ ಮಂಡಳಿ ಸಭೆಯನ್ನು ಬಹಿಷ್ಕರಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ. 

ರಾಜ್ಯಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕೆಸಿಆರ್  ಮೋದಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ಬಲಿಷ್ಠ ಮತ್ತು ಆರ್ಥಿಕವಾಗಿ ಚೈತನ್ಯವಿರುವ ರಾಜ್ಯಗಳು ಮಾತ್ರ ರಾಷ್ಟ್ರವನ್ನು ಬಲಿಷ್ಠಗೊಳಿಸಬಲ್ಲವು ಎಂದು ಅವರು ತಿಳಿಸಿದ್ದಾರೆ.

ಈ ಸತ್ಯಗಳ ದೃಷ್ಟಿಯಿಂದ, ಆಗಸ್ಟ್ 7, 2022 ರಂದು ನಡೆಯಲಿರುವ ನೀತಿ ಆಯೋಗದ 7 ನೇ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಲು ನನಗೆ ಪ್ರಯೋಜನವಾಗುತ್ತಿಲ್ಲ ಮತ್ತು  ಕೇಂದ್ರದ ವಿರುದ್ಧದ ತೀವ್ರ ಪ್ರತಿಭಟನೆಯ ಸಂಕೇತವಾಗಿ ನಾನು ಅದರಿಂದ ದೂರವಿದ್ದೇನೆ ಎಂದಿದ್ದಾರೆ.

ರಾಷ್ಟ್ರವನ್ನು ಬಲಿಷ್ಠ ಮತ್ತು ಅಭಿವೃದ್ಧಿಗೊಳಿಸುವ ನಮ್ಮ ಸಾಮೂಹಿಕ ಪ್ರಯತ್ನದಲ್ಲಿ ರಾಜ್ಯಗಳ ವಿರುದ್ಧ ತಾರತಮ್ಯ ಮತ್ತು ಸಮಾನ ಪಾಲುದಾರರಾಗಿ ಪರಿಗಣಿಸದ  ಕೇಂದ್ರ ಸರ್ಕಾರದ ಪ್ರವೃತ್ತಿ ನೀತಿ ಆಯೋಗದ ಸಭೆ ಬಹಿಷ್ಕಾರಕ್ಕೆ ಕಾರಣ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ. 

SCROLL FOR NEXT