ದೇಶ

ಸಂಸತ್ ಅಧಿವೇಶನ ನಿಗದಿಗಿಂತ ನಾಲ್ಕು ದಿನ ಮುಂಚಿತವಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Lingaraj Badiger

ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ನಿಗದಿತ ಅವಧಿಗಿಂತ ನಾಲ್ಕು ದಿನ ಮುಂಚಿತವಾಗಿ ಸೋಮವಾರ ಮುಕ್ತಾಯಗೊಂಡಿದೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಇಂದು ಅನಿರ್ದಿಷ್ಟಾವಧಿಗೆ ಮುಂದೂಡಿದರು. 16 ದಿನಗಳ ಕಾಲ ನಡೆದ ಸಂಸತ್ ಅಧಿವೇಶನದಲ್ಲಿ ಏಳು ವಿಧೇಯಕಗಳನ್ನು ಅಂಗೀಕರಿಸಲಾಗಿದೆ.

ಆಗಸ್ಟ್ 10 ರಂದು ನಿವೃತ್ತಿಯಾಗಲಿರುವ ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರು, ಅಧಿವೇಶನಕ್ಕೆ ಸಂಬಂಧಿಸಿದ ವಿವರವಾದ ಅಂಕಿಅಂಶಗಳನ್ನು ರಾಜ್ಯಸಭೆಯ ಸೆಕ್ರೆಟರಿಯೇಟ್ ಕೋರ್ಸ್ ಸಮಯದಲ್ಲಿ ನೀಡಲಾಗುವುದು ಎಂದು ಹೇಳಿ ಸದನವನ್ನುಅನಿರ್ದಿಷ್ಟಾವಧಿಗೆ ಮುಂದೂಡಿದರು.

ಜುಲೈ 18 ರಿಂದ ಆಗಸ್ಟ್ 12 ರವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಆಗಸ್ಟ್ 8 ರಂದೇ ಸಂಸತ್ ಮುಂಗಾರು ಅಧಿವೇಶನಕ್ಕೆ ತೆರೆ ಎಳೆಯಲಾಗಿದೆ.

SCROLL FOR NEXT