ದೇಶ

ಬ್ರೇಕ್ ವೈಫಲ್ಯ, ರಸ್ತೆ ಬದಿ ನಿಂತಿದ್ದ ಆಟೋಗಳಿಗೆ ಡಿಕ್ಕಿ ಹೊಡೆದ ಬಸ್, ಹಲವರಿಗೆ ಗಾಯ, ಭಯಾನಕ ವಿಡಿಯೋ!

Nagaraja AB

ಮುಂಬೈ: ಬ್ರೇಕ್ ವೈಫಲ್ಯದಿಂದ ಬಸ್ ವೊಂದು ರಸ್ತೆ ಬದಿ ನಿಂತಿದ್ದ ಪ್ರಯಾಣಿಕ ಹಾಗೂ ಸರಕು ಸಾಗಣೆಯ ಆಟೋಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ  ನಾಲ್ವರು ಗಾಯಗೊಂಡಿದ್ದಾರೆ. 

ಆಟೋದಲ್ಲಿದ್ದ ವ್ಯಕ್ತಿಯನ್ನು ಕೆಲ ದೂರ ಎಳೆದೊಯ್ದಿದೆ. ಆದರೆ, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಬ್ರೇಕ್ ವೈಫಲ್ಯಗೊಂಡ ಬಸ್ ಹಿಂದಲೇ ಜನರು ಆತಂಕದಿಂದ ಓಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಸ್ ಸಂತೋಷ್ ನಗರಿಂದ ಕುರ್ಲಾಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ದಿಂಡೋಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

SCROLL FOR NEXT