ದೇಶ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೊರೋನಾ ಪಾಸಿಟಿವ್

Sumana Upadhyaya

ನವದೆಹಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಮತ್ತೆ ಕೋವಿಡ್ ಪಾಸಿಟಿವ್ ಬಂದಿದೆ. ಸರ್ಕಾರದ ಕೊರೋನಾ ಶಿಷ್ಟಾಚಾರ ಪ್ರಕಾರ ಅವರು ಹೋಂ ಐಸೊಲೇಷನ್ ಗೆ ಒಳಗಾಗಲಿದ್ದಾರೆ ಎಂದು ಪಕ್ಷದ ಸಂಸದ ಹಾಗೂ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.

75 ವರ್ಷದ ಸೋನಿಯಾ ಗಾಂಧಿಯವರಿಗೆ ಕಳೆದ ಜೂನ್ ತಿಂಗಳಲ್ಲಿ ಕೊರೋನಾ ಪಾಸಿಟಿವ್ ಬಂದು ಆರೋಗ್ಯದಲ್ಲಿ ಏರುಪೇರು ಆಗಿ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಕೆಲ ದಿನಗಳ ನಂತರ ಬಿಡುಗಡೆಯಾಗಿದ್ದರು. ಆಗ ಅವರಿಗೆ ಶ್ವಾಸನಾಳ ಸೋಂಕು ಕೂಡ ಕಾಣಿಸಿಕೊಂಡಿತ್ತು.

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಇಡಿಯಿಂದ ನೊಟೀಸ್ ಜಾರಿಯಾಗಿದ್ದರೂ ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಗೆ ಸೋನಿಯಾ ಗಾಂಧಿಯವರು ಹಾಜರಾಗಿರಲಿಲ್ಲ.

SCROLL FOR NEXT