ದೇಶ

ಆರೋಗ್ಯ ಸೇವೆ, ಶಿಕ್ಷಣ ಸುಧಾರಣೆಗೆ ಕೇಂದ್ರದೊಂದಿಗೆ ಕೆಲಸ ಮಾಡಲು ಸಿದ್ಧ- ಕೇಜ್ರಿವಾಲ್ 

Nagaraja AB

ನವದೆಹಲಿ: ವಿಶ್ವದಲ್ಲಿ ಭಾರತವನ್ನು ನಂಬರ್ ರಾಷ್ಟ್ರವನ್ನಾಗಿ ಮಾಡಲು ದೇಶಾದ್ಯಂತ ಆರೋಗ್ಯ ಸೌಕರ್ಯಗಳು ಮತ್ತು ಶಾಲಾ ಶಿಕ್ಷಣದ ಸುಧಾರಣೆಗಾಗಿ ದೆಹಲಿ ಸರ್ಕಾರದ ತಜ್ಞರನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಪ್ರೀಬಿಯಸ್ ಎಂದು ಕರೆಯುವುದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿಲ್ಲಿಸುವಂತೆ ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ ರಾಜಕೀಯ ವಾಕ್ ಪ್ರಹಾರ ನಡೆಯುತ್ತಿದ್ದು, ಜನರನ್ನು ಮರಳು ಮಾಡಿ, ಅಧಿಕಾರಕ್ಕೆ ಬರಲು ಕೇಜ್ರಿವಾಲ್ ಇವುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕಳೆದ ತಿಂಗಳು ಬುಂದೇಲ್ ಖಂಡ ಎಕ್ಸ್ಪ್ರೆಸ್ ವೇ ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮತಕ್ಕಾಗಿ ಪ್ರೀಬಿಯಸ್ ಅವಕಾಶ ನೀಡಲಾಗುತ್ತಿದೆ. ಇದು ದೇಶದ ಅಭಿವೃದ್ಧಿಗೆ ಬಹಳ ಅಪಾಯಕಾರಿ ಎಂದು ಹೇಳಿದ್ದರು.  ವರ್ಚುಯಲ್ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಕೇಜ್ರಿವಾಲ್, ಶಿಕ್ಷಣ ಮತ್ತು ಆರೋಗ್ಯ ಸೇವೆ ಸುಧಾರಣೆಗಾಗಿ ಕೇಂದ್ರದೊಂದಿಗೆ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಕೇಂದ್ರ ಸರ್ಕಾರ ಪ್ರೀಬಿಯಸ್ ಎಂದು ಕರೆಯುವುದನ್ನು ನಿಲ್ಲಿಸಬೇಕು ಎಂದರು. 

ಸರ್ಕಾರಿ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಬೇಕಾದ ಅಗತ್ಯವಿದೆ. ಅವುಗಳನ್ನು ಸುಧಾರಿಸಿ, ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಬೇಕಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡಬೇಕಾಗಿದೆ. ನಂತರ ದೇಶ ಶ್ರೀಮಂತ ರಾಷ್ಟ್ರವಾಗಲಿದೆ ಎಂದು ಕೇಜ್ರಿವಾಲ್ ನುಡಿದರು. ಐದು ವರ್ಷಗಳಲ್ಲಿ ಇದೆಲ್ಲವನ್ನೂ ಮಾಡಬಹುದು. ನಾವು ಮಾಡಿದ್ದೇವೆ. ಸರ್ಕಾರಿ ಶಾಲೆಗಳು ಮತ್ತು ಆರೋಗ್ಯ ಸೇವೆ ಸುಧಾರಣೆಗಾಗಿ ನಮ್ಮ ತಜ್ಞರನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳಲಿ, ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು. 

SCROLL FOR NEXT