ಬಿಜೆಪಿ ಲೋಗೋ 
ದೇಶ

ತಮ್ಮ ಬೆಂಬಲಿಗರಿಂದ 5 ಮಂದಿಯ ಗುಂಪು ಹತ್ಯೆ ಒಪ್ಪಿಕೊಂಡ ಬಿಜೆಪಿ ಮುಖಂಡನ ವೀಡಿಯೋ ವೈರಲ್!

ರಾಜಸ್ಥಾನದ ಬಿಜೆಪಿಯ ಮಾಜಿ ಶಾಸಕ ಗ್ಯಾನ್ ದೇವ್ ಅಹುಜಾ, ತಮ್ಮ ಬೆಂಬಲಿಗರು 5 ಮಂದಿಯನ್ನು ಗುಂಪು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.

ಜೈಪುರ: ರಾಜಸ್ಥಾನದ ಬಿಜೆಪಿಯ ಮಾಜಿ ಶಾಸಕ ಗ್ಯಾನ್ ದೇವ್ ಅಹುಜಾ, ತಮ್ಮ ಬೆಂಬಲಿಗರು 5 ಮಂದಿಯನ್ನು ಗುಂಪು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿರುವ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ.ರಾಜಸ್ಥಾನ ಕಾಂಗ್ರೆಸ್ ಮುಖಂಡ ಗೋವಿಂದ್ ಸಿಂಗ್ ದೊಸ್ತಾರ ಟ್ವಿಟರ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

45 ವರ್ಷದ ಚಿರಣ್ಜಿ ಲಾಲ್ ಸೈನಿ ಎಂಬಾತನನ್ನು ಟ್ರ್ಯಾಕ್ಟರ್ ಕಳ್ಳತನ ಮಾಡಿದ ಶಂಕೆಯಲ್ಲಿ ಮೇವ್ ಮುಸ್ಲಿಮ್ ಸಮುದಾಯದ ಸದಸ್ಯರು ಗೋವಿಂದಗಢದಲ್ಲಿ ಗುಂಪು ಹತ್ಯೆ ಮಾಡಿದ್ದರು. 

ಈ ರೀತಿ ಗುಂಪು ಹತ್ಯೆ ಮಾಡಿದವರ ವಿರುದ್ಧ ಹೋರಾಟಕ್ಕೆ ಜನರಿಗೆ ಕರೆ ನೀಡುತ್ತಿದ್ದ ಭಾಷಣಕಾರನ ಭಾಷಣಕ್ಕೆ ಅಡ್ಡಿ ಪಡಿಸಿದ ಬಿಜೆಪಿ ನಾಯಕ ಗುಂಪು ಹತ್ಯೆ ಬಗ್ಗೆ ಮಾತನಾಡಿದ್ದಾರೆ.

ಸ್ಥಳೀಯ ಆರ್ ಎಸ್ ಎಸ್ ನಾಯಕ ಚಿರಣ್ಜಿ ಲಾಲ್ ಸೈನಿ ಗುಂಪು ಹತ್ಯೆಯನ್ನು ಖಂಡಿಸಲು ಆಂದೋಲನ ನಡೆಸಬೇಕೆಂದು ಆಗ್ರಹಿಸಿದಾಗ, ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ನಾವು ಈ ವರೆಗೂ ಲಾವಂಡಿಯಲ್ಲಿ 5 ಮಂದಿಯನ್ನು ಗುಂಪು ಹತ್ಯೆ ಮಾಡಿದ್ದೇವೆ. ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗಿದ್ದು, ಅವರು ಒಬ್ಬರನ್ನು ಗುಂಪು ಹತ್ಯೆ ಮಾಡಿದ್ದಾರೆ ಎಂದು ಹೇಳಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಬಿಜೆಪಿ ನಾಯಕನ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪಕ್ಷ ಇದು ಅವರ ವೈಯಕ್ತಿಕ ಹೇಳಿಕೆ ಪಕ್ಷ ಈ ರೀತಿಯ ಆಲೋಚನೆಗಳನ್ನು ಹೊಂದಿಲ್ಲ ಎಂದು ಹೇಳಿದೆ. ಇನ್ನು ಮಾಜಿ ಶಾಸಕನನ್ನು ಸಂಪರ್ಕಿಸಿದಾಗ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಗೋಹತ್ಯೆ ಹಾಗೂ ಗೋಕಳ್ಳಸಾಗಣೆಯಲ್ಲಿ ತೊಡಗಿರುವವರನ್ನು ನಾವು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT