ದೇಶ

ಗೂಗಲ್ ಕ್ರೋಮ್ ಬಳಕೆದಾರರೇ ಎಚ್ಚರ! ಹ್ಯಾಕರ್ ಗಳು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆ- ಕೇಂದ್ರ ಸರ್ಕಾರ

Nagaraja AB

ನವದೆಹಲಿ: ಗೂಗಲ್ ಕ್ರೋಮ್ ಬಳಕೆದಾರರಿಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ.  ಗೂಗಲ್ ಕ್ರೋಮ್ ನಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿವೆ. ಇದರಿಂದಾಗಿ ಹ್ಯಾಕರ್ ಗಳು ಅದರ ಲಾಭ ಪಡೆದು ಕಂಪ್ಯೂಟರ್ ನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಐಟಿ ಸಚಿವಾಲಯದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (SERT-in) ಡೆಸ್ಕ್ ಟಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. SERT-in ಈ ಹಿಂದೆ Apple iOS, Apple Ipad ಮತ್ತು Macos ನಲ್ಲಿನ ದೋಷಗಳ ಬಗ್ಗೆಯೂ ಎಚ್ಚರಿಕೆ ನೀಡಿತ್ತು.

SERT-in ನೀಡಿರುವ ಮಾಹಿತಿ ಪ್ರಕಾರ, ಗೂಗಲ್ ಕ್ರೋಮ್ ನಲ್ಲಿ ಹಲವು ನ್ಯೂನತೆಗಳಿವೆ. ಈ ನ್ಯೂನತೆಗಳ ಲಾಭ ಪಡೆದುಕೊಂಡು ಹ್ಯಾಕರ್ ಗಳು ನಿಮ್ಮ ಸಿಸ್ಟಮ್ ಗೆ ರಚಿಸಲಾದ ಕಾರ್ಪಟೆಡ್ ರಿಕ್ವೆಸ್ಟ್ ಕಳುಹಿಸುವ ಮೂಲಕ ಆರ್ಬಿಟರಿ ಕೋಡ್ ನ್ನು ಕಾರ್ಯಗತಗೊಳಿಸಬಹುದು. ಈ ಕೋಡ್ ನಿಮ್ಮ ಕಂಪ್ಯೂಟರ್ ನ ಆ್ಯಂಟಿ ವೈರಸ್ ನ್ನು ಬೈಪಾಸ್ ಮಾಡಿ ಸಂಪೂರ್ಣವಾಗಿ ಹ್ಯಾಕ್ ಮಾಡಬಹುದಾಗಿದೆ.

ನಿಮ್ಮ ಕಂಪ್ಯೂಟರ್ ಸುರಕ್ಷಿತವಾಗಿರಬೇಕೆ?

ಹ್ಯಾಕಿಂಗ್ ತಪ್ಪಿಸಲು ಬಳಕೆದಾರರು ಮೊದಲು ತಮ್ಮ ಗೂಗಲ್ ಕ್ರೋಮ್ ನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕಾಗುತ್ತದೆ. ಅಲ್ಲದೇ, ಬಳಕೆದಾರರು ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡುವುದನ್ನು ಮತ್ತು ಅಪರಿಚಿತ ವೆಬ್ ಸೈಟ್ ಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಇದರಿಂದ ನಿಮ್ಮ ಕಂಪ್ಯೂಟರ್ ಸುರಕ್ಷಿತವಾಗಿರಲಿದೆ.

SCROLL FOR NEXT