ದೇಶ

ಪದ್ಮ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ಸಾರ್ವಜನಿಕರಿಗೆ ಪೋರ್ಟಲ್ ಓಪನ್

Srinivas Rao BV

ನವದೆಹಲಿ: 2023 ನೇ ಸಾಲಿನ ಪದ್ಮ ಪ್ರಶಸ್ತಿಗೆ ಶಿಫಾರಸುಗಳನ್ನು ಹಾಗೂ ನಾಮ ನಿರ್ದೇಶನಗಳನ್ನು ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ ಪದ್ಮ ಪ್ರಶಸ್ತಿ ಪೋರ್ಟಲ್ ಮುಕ್ತವಾಗಿದೆ. 

ಸೆ.15 ಶಿಫಾರಸು ಹಾಗೂ ನಾಮ ನಿರ್ದೇಶನಗಳನ್ನು ಸಲ್ಲಿಸುವುದಕ್ಕೆ ಕೊನೆಯ ದಿನವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ ನಲ್ಲಿ ಮಾತ್ರ ಸಲ್ಲಿಸುವುದಕ್ಕೆ ಅವಕಾಶವಿದೆ ಎಂದು ಸಾರ್ವಜನಿಕರಿಗೆ ಸಚಿವಾಲಯ ಮಾಹಿತಿ ನೀಡಿದೆ. 

1954 ರಲ್ಲಿ ಸಂಸ್ಥಾಪನೆಗೊಂಡ ಪದ್ಮ ಪ್ರಶಸ್ತಿಗಳು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿದ್ದು, ಪ್ರತಿ ವರ್ಷ ಗಣರಾಜ್ಯೋತ್ಸವದಂದು ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕೆಲಸ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ.

ಸಾರ್ವಜನಿಕರು ಸಲ್ಲಿಸಲಿರುವ ಶಿಫಾರಸುಗಳು ಪೋರ್ಟಲ್ ನಲ್ಲಿ ನೀಡಿರುವ ಸ್ವರೂಪದಲ್ಲಿ ಗರಿಷ್ಠ 800 ಪದ ಮಿತಿಯನ್ನು ದಾಟಬಾರದು ಎಂಬ ನಿಬಂಧನೆಗಳನ್ನು ವಿಧಿಸಲಾಗಿದೆ. 

SCROLL FOR NEXT