ದೇಶ

2015ರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಖುಲಾಸೆ

Ramyashree GN

ಪಾಟ್ನಾ: ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು 2015ರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಬುಧವಾರ ಖುಲಾಸೆಗೊಳಿಸಲಾಗಿದೆ.

2015ರಲ್ಲಿ ತಮ್ಮ ಕಿರಿಯ ಪುತ್ರ ತೇಜಸ್ವಿ ಯಾದವ್ ಪರವಾಗಿ ರಾಘೋಪುರದಿಂದ ಪ್ರಚಾರ ಪ್ರಾರಂಭಿಸಿದಾಗ, ಆರ್‌ಜೆಡಿ ಮುಖ್ಯಸ್ಥರು ವಿಧಾನಸಭೆ ಚುನಾವಣೆಯನ್ನು 'ಹಿಂದುಳಿದ ಜಾತಿಗಳು ಮತ್ತು ಮುಂದುವರಿದ ಜಾತಿಗಳ' ನಡುವಿನ ನೇರ ಹೋರಾಟ ಎಂದು ಬಣ್ಣಿಸಿದ್ದರು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಸೋಲಿಸಲು ಯಾದವರು ಹಾಗೂ ಇತರ ಹಿಂದುಳಿದ ಜಾತಿಗಳು ಜಾತ್ಯತೀತ ಮೈತ್ರಿಯಡಿ ಒಂದಾಗಬೇಕೆಂದು ಕರೆ ನೀಡಿದ್ದರು.

ಜಾತಿವಾದದ ಹೇಳಿಕೆ ನೀಡಿದ್ದಕ್ಕಾಗಿ ಲಾಲು ಪ್ರಸಾದ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಚುನಾವಣಾ ಆಯೋಗವು ಆರ್‌ಜೆಡಿ ನಾಯಕನಿಗೆ ನೋಟಿಸ್ ನೀಡಿತ್ತು.

ಆದರೆ, ಬುಧವಾರ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಲಾಲು ಪ್ರಸಾದ್ ಯಾದವ್ ಅವರನ್ನು ಖುಲಾಸೆಗೊಳಿಸಲಾಗಿದೆ.

SCROLL FOR NEXT