ಮದರಸಾ ನೆಲಸಮ 
ದೇಶ

ಅಸ್ಸಾಂ: ಅಲ್-ಖೈದಾ ಉಗ್ರ ಸಂಘಟನೆಯೊಂದಿಗೆ ನಟು ಆರೋಪ; ಮದರಸಾ ನೆಲಸಮ

ಎಕ್ಯೂಐಎಸ್ ಕಾರ್ಯಕರ್ತ ಶಿಕ್ಷಕನನ್ನು ಬಂಧಿಸಿದ ನಂತರ ಅಲ್-ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಮೂರನೇ ಮದರಸಾವನ್ನು ನೆಲಸಮ ಮಾಡಲಾಗಿದೆ.

ಬೊಂಗೈಗಾಂವ್: ಎಕ್ಯೂಐಎಸ್ ಕಾರ್ಯಕರ್ತ ಶಿಕ್ಷಕನನ್ನು ಬಂಧಿಸಿದ ನಂತರ ಅಲ್-ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಮೂರನೇ ಮದರಸಾವನ್ನು ನೆಲಸಮ ಮಾಡಲಾಗಿದೆ.

ಈ ವರ್ಷದ ಮಾರ್ಚ್‌ನಿಂದ ರಾಜ್ಯದಲ್ಲಿ ಬಾಂಗ್ಲಾದೇಶೀಯರು ಸೇರಿದಂತೆ ‘ಜಿಹಾದಿ’ ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿರುವ 40ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಲಾಗಿದೆ.

ಬೊಂಗೈಗಾಂವ್ ಜಿಲ್ಲೆಯಲ್ಲಿ ಅಲ್-ಖೈದಾಗೆ ಸಂಬಂಧಿಸಿದ ಮತ್ತೊಂದು ಮದರಸಾವನ್ನು ಅಸ್ಸಾಂ ಸರ್ಕಾರ ಬುಧವಾರ ನೆಲಸಮಗೊಳಿಸಿದೆ. ಈ ಶಿಕ್ಷಣ ಸಂಸ್ಥೆಗಳು ತಮ್ಮ ಆವರಣದಲ್ಲಿ ‘ಜಿಹಾದಿ’ ಚಟುವಟಿಕೆ ನಡೆಸುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ ಬಳಿಕ ಈ ತಿಂಗಳು ರಾಜ್ಯ ಸರ್ಕಾರ ನೆಲಸಮಗೊಳಿಸುತ್ತಿರುವ ಮೂರನೇ ಮದರಸಾ ಇದಾಗಿದೆ.

ಜಿಲ್ಲೆಯ ಜೋಗಿಘೋಪಾ ಪ್ರದೇಶದಲ್ಲಿರುವ ಕಬೈತರಿ ಮಾ ಆರಿಫ್ ಮದರಸಾದ ಎರಡು ಅಂತಸ್ತಿನ ಕಟ್ಟಡವನ್ನು ಕೆಡವಲು ಸುಮಾರು ಹನ್ನೆರಡು ಜೆಸಿಬಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆವರಣದಲ್ಲಿನ ಇತರ ರಚನೆಗಳನ್ನು ಸಹ ನೆಲಸಮಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಶುಕ್ರವಾರ ಪೊಲೀಸರು ಇದೇ ಮದ್ರಸಾದ ಶಿಕ್ಷಕ ಮುಫ್ತಿ ಹಫೀಜುರ್ ರಹಮಾನ್ ಅವರನ್ನು ಬಂಧಿಸಿದ್ದರು. ಅವರು ಎಕ್ಯೂಐಎಸ್ ಸದಸ್ಯ ಮತ್ತು ಲಾವೋಸ್ ಅನ್ಸಾರುಲ್ ಬಾಂಗ್ಲಾ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಹೇಳಲಾಗಿದೆ.

ನಾಲ್ಕು ವರ್ಷಗಳಿಂದ ಅನ್ಸಾರುಲ್ ಬಾಂಗ್ಲಾ ತಂಡದ ಇಬ್ಬರು ಬಾಂಗ್ಲಾದೇಶಿ ಕಾರ್ಯಕರ್ತರಿಗೆ ಆಶ್ರಯ ನೀಡಿದ್ದ ಬಾರ್ಪೇಟಾ ಜಿಲ್ಲೆಯ ಮತ್ತೊಂದು ಮದರಸಾವನ್ನು ಸೋಮವಾರ ನೆಲಸಮಗೊಳಿಸಲಾಗಿದೆ.

ಮಂಗಳವಾರ ರಾತ್ರಿ ಗೋಲ್‌ಪಾರಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕ್ಯಾಂಟೀನ್‌ನಿಂದ ‘ಜಿಹಾದಿ’ ಅಂಶಗಳಿಗೆ ಸಂಬಂಧಿಸಿದ ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಕಬೈತರಿ ಮಾ ಆರಿಫ್ ಮದರಸಾವನ್ನು ಕೆಡವಲಾಗುತ್ತಿದೆ ಎಂದು ಬೊಂಗೈಗಾಂವ್‌ನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಗೋಲ್ಪಾರಾ ಪೊಲೀಸರು ಕಳೆದ ವಾರ ಮದರಸಾದ ಶಿಕ್ಷಕನನ್ನು ಬಂಧಿಸಿದ್ದರು ಮತ್ತು ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗಿತ್ತು.

“ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮದರಸಾಕ್ಕೆ ನೋಟಿಸ್ ನೀಡಿದ್ದರು ಮತ್ತು ಇದು ಜನವಸತಿಗೆ ಯೋಗ್ಯವಾಗಿಲ್ಲ ಎಂದು ಘೋಷಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಶಿಕ್ಷಣ ಸಂಸ್ಥೆಯಲ್ಲಿದ್ದ ವಿದ್ಯಾರ್ಥಿಗಳು ಮಂಗಳವಾರ ರಾತ್ರಿಯೇ ತಮ್ಮ ಮನೆಗಳಿಗೆ ತೆರಳಿದ್ದಾರೆ. ಜಿಲ್ಲಾಡಳಿತವು ವಿದ್ಯಾರ್ಥಿಗಳಿಗೆ ಆವರಣವನ್ನು ಖಾಲಿ ಮಾಡಲು ಸಹಾಯ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT