ದೇಶ

ಯುವ ಮತದಾರರು, ಮೊದಲ ಬಾರಿ ಮತ ಚಲಾಯಿಸುವವರು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಿ: ಪ್ರಧಾನಿ ಮೋದಿ

Manjula VN

ನವದೆಹಲಿ: ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ 2022ರ ಮೊದಲ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತದಾರರಿಗೆ ಅದರಲ್ಲೂ ಯುವ ಮತದಾರರು ಹೆಚ್ಚು ಉತ್ಸಾಹದಲ್ಲಿ ಮತಗಟ್ಟೆಗಳಿಗೆ ಆಗಮಿಸಿ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕರೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಇಂದು ಗುಜರಾತ್ ಚುನಾವಣೆಯ ಮೊದಲ ಹಂತದ ಮತದಾನ. ಇಂದು ಮತದಾನ ಮಾಡುವ ಎಲ್ಲರಿಗೂ, ವಿಶೇಷವಾಗಿ ಮೊದಲ ಬಾರಿಗೆ ಮತ ಹಕ್ಕು ಚಲಾಯಿಸುತ್ತಿರುವ ಮತದಾರರು ತಮ್ಮ ಹಕ್ಕುಗಳನ್ನು ದಾಖಲೆ ಸಂಖ್ಯೆಯಲ್ಲಿ ಚಲಾಯಿಸುವಂತೆ ಕರೆ ನೀಡುತ್ತೇನೆಂದು ಹೇಳಿದ್ದಾರೆ.

ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ 2022ರ ಮೊದಲ ಹಂತದ ಮತದಾನ ಗುರುವಾರ ಆರಂಭವಾಗಿದ್ದು, ಈ ಹಂತದಲ್ಲಿ 89 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

182 ಸ್ಥಾನಗಳ ವಿಧಾನಸಭೆಯಲ್ಲಿ 89 ಸ್ಥಾನಗಳಿಗೆ ಮೊದಲ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ. 89 ಸ್ಥಾನಕ್ಕೆ 788 ಜನ ಸ್ಪರ್ಧೆ ಮಾಡಿದ್ದು, ಉಳಿದ 93 ಸ್ಥಾನಗಳಿಗೆ ಡಿ.5 ರಂದು ಮತದಾನ ನಡೆಯಲಿದೆ. ಡಿ.8 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್ ಆಪ್ ಚುನಾವಣಾ ಕದನದಲ್ಲಿ ಹೋರಾಟ ಮಾಡುತ್ತಿವೆ.

SCROLL FOR NEXT