ದೇಶ

ಸಿಲಿಂಡರ್​ ಇಟ್ಟುಕೊಂಡು ಏನು ಮಾಡುತ್ತೀರಾ, ಬೆಂಗಾಳಿಗಳಿಗಾಗಿ ಮೀನು ಬೇಯಿಸಿಕೊಡ್ತೀರಾ ಹೇಳಿಕೆ: ನಟ ಪರೇಶ್ ರಾವಲ್ ಕ್ಷಮೆಯಾಚನೆ

Manjula VN

ನವದೆಹಲಿ: ‘ಗ್ಯಾಸ್​ ಸಿಲಿಂಡರ್​ ಬೆಲೆ ದುಬಾರಿ ಆಗಿದೆ. ಬೆಲೆ ಇಳಿಯುತ್ತದೆ. ಸಿಲಿಂಡರ್​ ಇಟ್ಟುಕೊಂಡು ನೀವೇನು ಮಾಡುತ್ತೀರಿ? ಬೆಂಗಾಳಿಗಳಿಗಾಗಿ ಮೀನು ಬೇಯಿಸಿಕೊಡ್ತೀರಾ’ ಎಂದು ಹೇಳಿಕೆ ನೀಡಿ ಟೀಕೆಗಳಿಗೆ ಗುರಿಯಾಗಿದ್ದ ನಟ ಪರೇಶ್ ರಾವಲ್ ಅವರು ಇದೀಗ ತಮ್ಮ ಹೇಳಿಕೆ ಸಂಬಂಧ ಶುಕ್ರವಾರ ಕ್ಷಮೆಯಾಚಿಸಿದ್ದಾರೆ.

ವಲ್ಸಾಡ್‍ನಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿದ್ದ ಪರೇಶ್ ರಾವಲ್ ಅವರು, ಗುಜರಾತ್ ರಾಜ್ಯದ ಜನರು ಹಣದುಬ್ಬರವನ್ನು ಸಹಿಸಿಕೊಳ್ಳುತ್ತಾರೆ. ಆದರೆ 'ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯರನ್ನಲ್ಲ'. "ಗ್ಯಾಸ್ ಸಿಲಿಂಡರ್‍ಗಳು ದುಬಾರಿಯಾಗಿವೆ, ಆದರೆ ಅವುಗಳ ಬೆಲೆ ಕಡಿಮೆಯಾಗಲಿವೆ. ಜನರಿಗೆ ಉದ್ಯೋಗ ಕೂಡ ದೊರೆಯಲಿದೆ. ಆದರೆ ರೋಹಿಂಗ್ಯ ವಲಸಿಗರು ಮತ್ತು ಬಾಂಗ್ಲಾದೇಶಿಗಳು ದೆಹಲಿಯಂತೆ ಇಲ್ಲಿಯೂ ನಿಮ್ಮ ಸುತ್ತಮುತ್ತ ವಾಸಿಸಲು ಆರಂಭಿಸಿದರೆ ಏನಾಗುತ್ತದೆ? ಗ್ಯಾಸ್ ಸಿಲಿಂಡರ್‍ಗಳೊಂದಿಗೆ ನೀವು ಏನು ಮಾಡುತ್ತೀರಿ? ಬಂಗಾಳಿಗಳಿಗೆ ಮೀನು ಬೇಯಿಸುತ್ತೀರಾ? ಎಂದು ಕೇಳಿದ್ದರು.

"ಗುಜರಾತ್ ಜನರು ಹಣದುಬ್ಬರ ಸಹಿಸುತ್ತಾರೆ, ಆದರೆ ಇದನ್ನಲ್ಲ... ಅವರು ನಿಂದನೆಗಳನ್ನು ಮಾಡುವ ರೀತಿ. ಅವರಲ್ಲಿರುವ ಒಬ್ಬ ವ್ಯಕ್ತಿ ತನ್ನ ಬಾಯಿಗೆ ಡಯಾಪರ್ ಹಾಕಬೇಕು'' ಎಂದು ಹೇಳುವ ಮೂಲಕ ಪರೋಕ್ಷವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿ ಮಾಡಿದ್ದರು ಮಾಡಿದ್ದರು.

ಅವರು ಖಾಸಗಿ ವಿಮಾನದಲ್ಲಿ ಆಗಮಿಸಿ ನಂತರ ತೋರ್ಪಡಿಕೆಗಾಗಿ ರಿಕ್ಷಾದಲ್ಲಿ ಕುಳಿತುಕೊಳ್ಳುತ್ತಾರೆ. ನಾವು ಜೀವನಮಾನ ಪೂರ್ತಿ ನಟನೆಯಲ್ಲಿ ಕಳೆದಿದ್ದೇವೆ. ಆದರೆ ಈ ರೀತಿಯ ನಾಟಕ ಮಾಡುವವರನ್ನು ನೋಡಿಲ್ಲ. ಮತ್ತು ಹಿಂದುಗಳ ವಿರುದ್ಧ ಬಹಳಷ್ಟು ನಿಂದನೆಗಳು. ಅವರು ಶಾಹೀನ್ ಬಾಗ್‍ನಲ್ಲಿ ಬಿರಿಯಾನಿ ಒದಗಿಸಿದ್ದರು ಎಂದಿದ್ದರು.

ಪರೇಶ್ ರಾವಲ್ ಅವರ ಈ ಹೇಳಿಕೆಗೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಪರೇಶ್ ಮಾತುಗಳು ಬಂಗಾಳಿಗಳ ವಿರುದ್ಧದ ದ್ವೇಷದ ಭಾಷಣ ಎಂಬು ಹಲವರು ಹೇಳಿದ್ದರು

ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಇದೀಗ ಪರೇಶ್ ರಾವಲ್ ಅವರು ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, "ಖಂಡಿತವಾಗಿ ಮೀನಿನ ವಿಚಾರ ಒಂದು ಸಮಸ್ಯೆಯಲ್ಲ, ಏಕೆಂದರೆ ಗುಜರಾತಿಗಳು ಕೂಡ ಮೀನು ತಿನ್ನುತ್ತಾರೆ. ಬಂಗಾಳಿ ಎಂದು ಹೇಳುವ ಮೂಲಕ ನಾನು ಅಕ್ರಮ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯರನ್ನು ಉಲ್ಲೇಖಿಸಿದ್ದೆ. ಆದರೂ ನಿಮ್ಮ ಭಾವನೆಗಳಿಗೆ ನೋವುಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

SCROLL FOR NEXT