ದೇಶ

ಒಡಿಶಾ ಉಪಚುನಾವಣೆ: ಹಣ ಹಂಚುತ್ತಿದ್ದ ಮೂವರು ಬಿಜೆಡಿ ಕಾರ್ಯಕರ್ತರು, ಬಿಜೆಪಿ ನಾಯಕನ ಬಂಧನ

Ramyashree GN

ಬರ್ಗಢ: ಪದಂಪುರ ಉಪಚುನಾವಣೆಗೆ ಒಂದು ದಿನ ಮೊದಲು, ಭಾನುವಾರ ಮತದಾರರಿಗೆ ಹಣ ಹಂಚುತ್ತಿದ್ದಾಗ ಮೂವರು ಬಿಜೆಡಿ ಕಾರ್ಯಕರ್ತರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ನಂತರ ಸರಿಕೆಲಾದಲ್ಲಿ ಉದ್ವಿಗ್ನತೆ ಉಂಟಾಗಿದೆ.

ಸರಿಕೆಲಾ ಗ್ರಾಮದಲ್ಲಿ ಐವರು ಬಿಜೆಪಿ ಕಾರ್ಯಕರ್ತರ ಗುಂಪು ಅನುಮಾನಾಸ್ಪದವಾಗಿ ಒಡಾಡುತ್ತಿದ್ದಾಗ ಮಧ್ಯಾಹ್ನ 12 ಗಂಟೆಗೆ ಈ ಘಟನೆ ನಡೆದಿದೆ. ಅವರಲ್ಲಿ ಇಬ್ಬರು ಗ್ರಾಮದ ಒಂದೆಡೆ ಕಾಯುತ್ತಿದ್ದರೆ, ಇತರರು ಕೆಲವು ಮತದಾರರನ್ನು ಭೇಟಿಯಾಗಲು ಹೋಗುತ್ತಿದ್ದರು. ಇದರಿಂದ ಅನುಮಾನಗೊಂಡ ಕೆಲ ಗ್ರಾಮಸ್ಥರು ಅವರನ್ನು ಸುತ್ತುವರಿದಿದ್ದಾರೆ.

ಬಿಜೆಡಿ ಕಾರ್ಯಕರ್ತರು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ, ಉಳಿದ ಮೂವರನ್ನು ವಶಕ್ಕೆ ಪಡೆದ ಗ್ರಾಮಸ್ಥರು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ, ಮಾಜಿ ಸಚಿವ ಮತ್ತು ಕಾಳಹಂಡಿಯ ಬಿಜೆಪಿ ನಾಯಕ ಹಿಮಾಂಶು ಶೇಖರ್ ಮೆಹರ್ ಅವರು ಸಂಜೆ ಜಗದಲ್‌ಪುರ ಗ್ರಾಮದಲ್ಲಿ ತೆರಳುತ್ತಿದ್ದಾಗ ಪದಂಪುರ ಪೊಲೀಸರು ಬಂಧಿಸಿದ್ದಾರೆ.

ಪದಂಪುರದ ಉಪವಿಬಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಬಿ.ಬಿ. ಭೋಯಿ ಮಾತನಾಡಿ, 'ಚುನಾವಣಾ ಪ್ರಚಾರದ ಅಂತ್ಯದ ನಂತರ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅನೇಕ ಗಸ್ತು ತಂಡಗಳು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಚಲನವಲನದ ಮೇಲೆ ನಿಗಾ ಇರಿಸುತ್ತಿವೆ. ಬಿಜೆಡಿಯ ಮೂವರು ಯುವಕರು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಸರಿಕೆಲ ಗ್ರಾಮಸ್ಥರು ಆರೋಪಿಸಿ, ಮೂವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಯಾವುದೇ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗದಂತೆ ಸೂಚಿಸಲಾಗಿದ್ದು, ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ.

ಬಿಜೆಪಿಯ ಹಿರಿಯ ನಾಯಕರಿಗೂ ಮತದಾರರನ್ನು ಭೇಟಿಯಾಗದಂತೆ ಕೇಳಿಕೊಳ್ಳಲಾಗಿದೆ. 'ನಾಲ್ಕು ವ್ಯಕ್ತಿಗಳ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ, ಅವರನ್ನು ಬಿಡಲಾಗಿದೆ. ಆದಾಗ್ಯೂ, ಮತದಾನ ಮುಗಿಯುವವರೆಗೆ ಅವರೆಲ್ಲರಿಗೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ಹೊರಗಿರುವಂತೆ ತಿಳಿಸಲಾಗಿದೆ ಎಂದು ಎಸ್‌ಡಿಪಿಒ ತಿಳಿಸಿದ್ದಾರೆ.

SCROLL FOR NEXT