ಗುಜರಾತ್ ನ ಗಾಂಧಿನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ 
ದೇಶ

ಗುಜರಾತ್ ನಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಈ 7 ಅಂಶಗಳು ಕಾರಣ; ವಿರೋಧ ಪಕ್ಷವಾಗಿ ದುರ್ಬಲ ಕಾಂಗ್ರೆಸ್ ಸ್ಥಾನಕ್ಕೆ ಆಪ್!

2022ರ ವಿಧಾನಸಭಾ ಚುನಾವಣೆಯ ಫಲಿತಾಂಶವು ಗುಜರಾತ್ ರಾಜಕೀಯದ ದಿಕ್ಕನ್ನು ತೀವ್ರವಾಗಿ ಬದಲಾಯಿಸುವ ಸಾಧ್ಯತೆಯಿದೆ. ಎಲ್ಲಾ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಮೇಲೆ ಈ ಚುನಾವಣೆ ಫಲಿತಾಂಶ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವನ್ನು ಬೀರಿದೆ.ಹಾಗಾದರೆ ಅದು ಹೇಗೆ ಎಂದು ವಿಮರ್ಶಿಸೋಣ ಬನ್ನಿ.

ಅಹಮದಾಬಾದ್: 2022ರ ವಿಧಾನಸಭಾ ಚುನಾವಣೆಯ ಫಲಿತಾಂಶವು ಗುಜರಾತ್ ರಾಜಕೀಯದ ದಿಕ್ಕನ್ನು ತೀವ್ರವಾಗಿ ಬದಲಾಯಿಸುವ ಸಾಧ್ಯತೆಯಿದೆ. ಎಲ್ಲಾ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ಮೇಲೆ ಈ ಚುನಾವಣೆ ಫಲಿತಾಂಶ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮವನ್ನು ಬೀರಿದೆ.ಹಾಗಾದರೆ ಅದು ಹೇಗೆ ಎಂದು ವಿಮರ್ಶಿಸೋಣ ಬನ್ನಿ.

ಬಿಜೆಪಿ
ಬಿಜೆಪಿ ಈ ಬಾರಿ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯಲ್ಲಿ ಜಯಭೇರಿ ಬಾರಿಸಿದೆ. ಅದಕ್ಕೆ ಕಾರಣಗಳು ಹಲವು. ಮೊದಲ ಮತ್ತು ಪ್ರಮುಖ ಕಾರಣವೆಂದರೆ ಪಿಎಂ ನರೇಂದ್ರ ಮೋದಿ ಅಂಶ, ನಂತರ ನೀರು ನಿರ್ವಹಣೆ, ಸುರಕ್ಷಿತ ಗುಜರಾತ್, ನಿರಂತರ ವಿದ್ಯುತ್ ಪೂರೈಕೆ, ಕೃಷಿ ಬೆಳವಣಿಗೆ, ಬಡವರು ಮತ್ತು ವಂಚಿತರನ್ನು ಸಬಲೀಕರಣಗೊಳಿಸುವುದು, ಗುಣಾತ್ಮಕ ವಿಶೇಷ ಶಿಕ್ಷಣ, ಮಹಿಳಾ ಸಬಲೀಕರಣ, ಬುಡಕಟ್ಟು ಜನಾಂಗದವರ ಸಬಲೀಕರಣ ಮತ್ತು ವೈಬ್ರೆಂಟ್ ಗುಜರಾತ್. ಭವಿಷ್ಯದಲ್ಲಿ ಬಿಜೆಪಿ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ.

ಕಾಂಗ್ರೆಸ್
ಕಾಂಗ್ರೆಸ್‌ಗೆ ಗುಜರಾತ್ ನಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟ ಮಾತ್ರವಲ್ಲ,  ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಲು ಸಹ ಅದು ಹೆಣಗಾಡಲಿದೆ. ವಿರೋಧ ಪಕ್ಷವಾಗಲು, ಗುಜರಾತ್‌ನಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಗೆಲ್ಲಬೇಕು, ಆದರೆ ಕಾಂಗ್ರೆಸ್ 18 ಸ್ಥಾನಗಳನ್ನು ಪಡೆಯಲು ಈ ಬಾರಿ ಸಾಧ್ಯವಾಗಿಲ್ಲ. ಗುಜರಾತ್ ರಾಜಕೀಯದಲ್ಲಿ ಕಾಂಗ್ರೆಸ್ ಪ್ರಸ್ತುತವಾಗಲು ಬಯಸಿದರೆ, ಅದು ತನ್ನ ಆಮೂಲಾಗ್ರ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

ಗುಜರಾತಿನಲ್ಲಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವರ್ಚಸ್ಸಿನ ವಿರುದ್ಧ ಹೋರಾಡಬೇಕು ಎಂಬುದನ್ನು ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಮರೆತಿದೆ. ರಾಜ್ಯದಲ್ಲಿ ಪುನರಾಗಮನ ಮಾಡಬೇಕಾದರೆ ಅದು ನರೇಂದ್ರ ಮೋದಿ ಅಥವಾ ಅಮಿತ್ ಶಾ ಅವರ ಪ್ರತಿಸ್ಪರ್ಧಿಯಾಗಿ ಪ್ರಬಲ ನಾಯಕರನ್ನು ಬೆಳೆಸಬೇಕಾಗುತ್ತದೆ. ಇಲ್ಲದಿದ್ದರೆ 2022 ರಲ್ಲಿ ಅದರ ಶೇಕಡಾ 28 ರಷ್ಟು ಮತಗಳನ್ನು 2024 ರಲ್ಲಿ ಉಳಿಸಿಕೊಳ್ಳಲಾಗುವುದಿಲ್ಲ.

ಆಪ್
ಗುಜರಾತಿನಲ್ಲಿ ಆಮ್ ಆದ್ಮಿ ಪಕ್ಷವು ತೀವ್ರ ಪ್ರಚಾರ ನಡುವೆಯೂ ಪ್ರಬಲ ಪ್ರತಿಪಕ್ಷವನ್ನು ರಚಿಸಲು ವಿಫಲವಾಗಿದೆ. 2017ರಲ್ಲಿಯೂ ಅದರ ಎಲ್ಲಾ 29 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಅದಕ್ಕಿಂತ ಉತ್ತಮ ಪ್ರದರ್ಶನ ಈ ಬಾರಿ ನೀಡಿದೆ. 2022 ರಲ್ಲಿ, ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗರ್ವಿ ಮತ್ತು ರಾಜ್ಯ ಅಧ್ಯಕ್ಷ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಆಮ್ ಆದ್ಮಿ ಪಕ್ಷಕ್ಕೆ ಅವರ ಐವರು ಅಭ್ಯರ್ಥಿಗಳು ಗೆದ್ದಿರುವುದು ಆಶಾದಾಯಕ.

ಪಂಜಾಬ್‌ನಂತೆ ಇಲ್ಲಿಯೂ ಎಎಪಿ ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರೆಸಿದರೆ, ಅದು ಗುಜರಾತ್‌ನಲ್ಲಿ ಕಾಂಗ್ರೆಸ್ ಬದಲಿಗೆ ವಿರೋಧ ಪಕ್ಷ ಸ್ಥಾನದಲ್ಲಿ ನಿಲ್ಲುವ ಸಾಧ್ಯತೆಯಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT