ದೇಶ

ಗುಜರಾತ್ ಶಾಸಕರ ಪೈಕಿ ಶೇ.83 ರಷ್ಟು ಮಂದಿ ಕೋಟ್ಯಾಧಿಪತಿಗಳು: ವರದಿ

Srinivas Rao BV

ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಆಯ್ಕೆಯಾಗಿರುವ ಶಾಸಕರ ಪೈಕಿ ಶೇ.83 ರಷ್ಟು ಮಂದಿ ಕರೋಡ್ ಪತಿಗಳಾಗಿದ್ದಾರೆ. 

182 ಶಾಸಕರ ಪೈಕಿ 151 ಮಂದಿ ಕನಿಷ್ಠ 1 ಕೋಟಿಗೂ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ. ಈ ಅಂಕಿ-ಅಂಶ 2017 ಕ್ಕಿಂತ ಹೆಚ್ಚಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ವರದಿ ಪ್ರಕಟಿಸಿದೆ. 2017 ರಲ್ಲಿ 141 ಮಂದಿ ಶಾಸಕರು ಕರೋಡ್ ಪತಿಗಳಾಗಿದ್ದರು.

ಈ ಅಧ್ಯಯನ ವರದಿಯ ಪ್ರಕಾರ ಬಿಜೆಪಿ 132 ಕೋಟ್ಯಾಧಿಪತಿ ಶಾಸಕರಿದ್ದು, ಕಾಂಗ್ರೆಸ್ ನಲ್ಲಿ 14 ಮಂದಿ ಕೋಟ್ಯಾಧಿಪತಿ ಶಾಸಕರಿದ್ದಾರೆ. ಆಮ್ ಆದ್ಮಿ ಪಕ್ಷ ಹಾಗೂ ಸಮಾಜವಾದಿ ಪಕ್ಷದಲ್ಲಿ ತಲಾ ಒಬ್ಬರು ಕೋಟ್ಯಾಧಿಪತಿ ಶಾಸಕರಿದ್ದಾರೆ. 

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 182 ಸ್ಥಾನಗಳಲ್ಲಿ 156 ಸ್ಥಾನಗಳನ್ನು ಗೆಲ್ಲುವ ಮೂಲಕ 7 ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೇರಿತ್ತು.

151 ಕೋಟ್ಯಾಧಿಪತಿ ಶಾಸಕರು 73 ಮಂದಿ 5 ಕೋಟಿ ರೂಪಾಯಿಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದರೆ, 73 ಮಂದಿ 2 ಕೋಟಿಯಿಂದ 5 ಕೋಟಿ ವರೆಗೆ ಆಸ್ತಿ ಹೊಂದಿದ್ದಾರೆ. ಗುಜರಾತ್ ನಲ್ಲಿ ಗೆದ್ದಿರುವ ಅಭ್ಯರ್ಥಿಗಳ ಸರಾಸರಿ ಆಸ್ತಿ 16.41 ಕೋಟಿ ರೂಪಾಯಿಗಳಷ್ಟಿದ್ದು, 2017 ರಲ್ಲಿ 8.46 ಕೋಟಿ ರೂಪಾಯಿ ಇತ್ತು.

SCROLL FOR NEXT