ದೇಶ

2020 ಚುನಾವಣೆಯಲ್ಲಿ ಜೆಡಿಯು ವಿರುದ್ಧ ಬಿಜೆಪಿ ಪಿತೂರಿ: ನಿತೀಶ್ 

Srinivas Rao BV

ನವದೆಹಲಿ: ಬಿಹಾರ ಸಿಎಂ ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ಆರೋಪ ಮಾಡಿದ್ದು, 2020 ರ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಯ ಹೊರತಾಗಿಯೂ ಜೆಡಿಯು ವಿರುದ್ಧ ಪಿತೂರಿ ನಡೆಸಿತ್ತು ಎಂದು ಆರೋಪಿಸಿದ್ದಾರೆ.
 
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿಸುವ ಪಕ್ಷಗಳು ಒಂದಾಗಲು ಒಪ್ಪಿದರೆ ಬಿಜೆಪಿಯನ್ನು ಮಣಿಸಬಹುದು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
 
ಸಂಯಕ್ತ ಜನತಾದಳದ ಅಧಿವೇಶನವನ್ನುದ್ದೇಶಿಸಿ ಮಾತನಾಡಿರುವ ನಿತೀಶ್ ಕುಮಾರ್, ಕಳೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಕಳಪೆ ಸಾಧನೆಗೆ ಬಿಜೆಪಿಯೇ ಕಾರಣ ಎಂದು ನಿತೀಶ್ ಆರೋಪಿಸಿದ್ದಾರೆ.
 
ಅದು 2005 ಆಗಿರಲಿ ಅಥವಾ 2010 ಆಗಿರಲಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಹಿಂದೆಂದೂ ಇಷ್ಟು ಕಡಿಮೆ ಸ್ಥಾನಗಳನ್ನು ಪಡೆದಿಲ್ಲ ಎಂಬುದನ್ನು ಬಿಜೆಪಿಗೆ ನೆನಪಿಸಬೇಕು. 2020 ರಲ್ಲಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸುವುದಕ್ಕಾಗಿಯೇ ಬಿಜೆಪಿಯವರು ಪಿತೂರಿ ನಡೆಸಿದ್ದರು ಎಂದು ನಿತೀಶ್ ಹೇಳಿದ್ದಾರೆ.
 
ತಾವು ಸಿಎಂ ಸ್ಥಾನದಲ್ಲಿ ಮುಂದುವರೆಯಲು ಇಚ್ಛಿಸಿರಲಿಲ್ಲ ಆದರೆ ಬಿಜೆಪಿಯ ಒತ್ತಾಯಕ್ಕೆ ಸಿಎಂ ಸ್ಥಾನ ಒಪ್ಪಿಕೊಂಡಿದ್ದೆ, ಬಿಹಾರಕ್ಕೆ ಕೇಂದ್ರದಿಂದ ಏನು ಸಿಗುತ್ತಿರಲಿಲ್ಲ. ಪ್ರಧಾನಿ ಮೋದಿ ಬ್ರಿಟೀಷರ ಅವಧಿಯಿಂದಲೂ ಸಂಪತ್ಭರಿತವಾದ ರಾಜ್ಯಕ್ಕೆ ಸೇರಿದವರಾಗಿದ್ದಾರೆ, ಬಡವರು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗಲಿದೆ ಎಂದು ನಿತೀಶ್ ಹೇಳಿದ್ದಾರೆ.
 

SCROLL FOR NEXT