ದೇಶ

ಉಕ್ರೇನ್ ವಿಷಯದಲ್ಲಿ ಮಾತುಕತೆಯೊಂದೇ ಇರುವ ಏಕೈಕ ಮಾರ್ಗ: ಪುಟಿನ್ ಗೆ ಪ್ರಧಾನಿ ಮೋದಿ

Srinivas Rao BV

ನವದೆಹಲಿ: ಉಕ್ರೇನ್ ವಿಷಯದಲ್ಲಿ ಮಾತುಕತೆಯೊಂದೇ ಇರುವ ಏಕೈಕ ಮಾರ್ಗ ಎಂದು ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ಕರೆ ನೀಡಿದ್ದಾರೆ.
 
ಈ ಬಗ್ಗೆ ಸರ್ಕಾರ ಹೇಳಿಕೆ ಪ್ರಕಟಿಸಿದ್ದು, ಪ್ರಧಾನಿ ಮೋದಿ- ರಷ್ಯಾ ಅಧ್ಯಕ್ಷ ಪುಟಿನ್ ಇಬ್ಬರೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದೆ. 

ಸಮರ್ ಖಂಡ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆ (ಎಸ್ ಸಿಒ) ನಲ್ಲಿ ಇಬ್ಬರೂ ನಾಯಕರು ದ್ವಿಪಕ್ಷೀಯ ಸಭೆ ನಡೆಸಿ ಇಂಧನ ಸಹಕಾರ, ವಾಣಿಜ್ಯ ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತಾ ಸಹಕಾರ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಈ ಸಭೆಯ ಬಳಿಕ ಈಗ ಉಭಯ ನಾಯಕರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
 
ದೂರವಾಣಿ ಕರೆಯಲ್ಲಿ ಪ್ರಧಾನಿ ಮೋದಿ ಭಾರತದ ಅಧ್ಯಕ್ಷತೆಯಲ್ಲಿರುವ ಜಿ-20ಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಭಾರತದ ಆದ್ಯತೆಗಳನ್ನು ವಿವರಿಸಿದ್ದಾರೆ. 

SCROLL FOR NEXT