ವಿಜಯ ದಿವಸ ಅಂಗವಾಗಿ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಭಾರತೀಯ ಸೇನೆಯ ಮೂರು ಪಡೆಗಳ ಮುಖ್ಯಸ್ಥರು, ರಕ್ಷಣಾ ಪಡೆ ಮುಖ್ಯಸ್ಥರಿಂದ ಗೌರವ ನಮನ 
ದೇಶ

1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ವಿಜಯದ ಸಂಕೇತ 'ವಿಜಯ್ ದಿವಸ್' ಆಚರಣೆ: ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವ ನಮನ

ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, 93 ಸಾವಿರ ಪಾಕ್ ಸೈನಿಕರನ್ನು ಶರಣಾಗಿಸಿ ವಿಜಯ ಸಾಧಿಸಿದ ಅವಿಸ್ಮರಣೀಯ ದಿನವೇ ವಿಜಯ್ ದಿವಸ-Vijay Diwas. ಈ ದಿನದಂದು ದೇಶದ ಗೌರವಕ್ಕಾಗಿ ಸೆಣಸಿದ ವೀರ ಭಾರತೀಯ ಸೇನಾನಿಗಳು ಹಾಗೂ ಆತ್ಮಾರ್ಪಣೆ ಮಾಡಿದ ಹುತಾತ್ಮ ಯೋಧರನ್ನು ಭಕ್ತಿಯಿಂದ ಸ್ಮರಿಸಲಾಗುತ್ತದೆ. 

ನವದೆಹಲಿ: ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, 93 ಸಾವಿರ ಪಾಕ್ ಸೈನಿಕರನ್ನು ಶರಣಾಗಿಸಿ ವಿಜಯ ಸಾಧಿಸಿದ ಅವಿಸ್ಮರಣೀಯ ದಿನವೇ ವಿಜಯ್ ದಿವಸ-Vijay Diwas. ಈ ದಿನದಂದು ದೇಶದ ಗೌರವಕ್ಕಾಗಿ ಸೆಣಸಿದ ವೀರ ಭಾರತೀಯ ಸೇನಾನಿಗಳು ಹಾಗೂ ಆತ್ಮಾರ್ಪಣೆ ಮಾಡಿದ ಹುತಾತ್ಮ ಯೋಧರನ್ನು ಭಕ್ತಿಯಿಂದ ಸ್ಮರಿಸಲಾಗುತ್ತದೆ. 

ದೇಶದ ರಕ್ಷಣಾ ಪಡೆ ಮುಖ್ಯಸ್ಥ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ವಿ ಆರ್ ಚೌಧರಿ, ಭಾರತೀಯ ನೌಕಾ ಪಡೆ ಉಪ ಮುಖ್ಯಸ್ಥ ಅಡ್ಮಿರಲ್ ಎಸ್ ಎನ್ ಘೋರ್ಮಡೆ ಅವರು ಸಹ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು. ಸೇನಾ ಸಂಪ್ರದಾಯದಂತೆ ಗೌರವ ನಮನ ಸಲ್ಲಿಸಲಾಯಿತು. 

ಡಿಸೆಂಬರ್ 16 ರಂದು ವಿಜಯ್ ದಿವಸ್ ಎಂದರೆ ಭಾರತೀಯ ಸಶಸ್ತ್ರ ಪಡೆಗಳು, ಯೋಧರು, ನಾಗರಿಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ತಮ್ಮ ಸೈನಿಕರ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಗೌರವ ಸಲ್ಲಿಸುತ್ತಾರೆ. 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಐತಿಹಾಸಿಕ ವಿಜಯವನ್ನು ನೆನಪಿಸುವ ದಿನವನ್ನು ವಿಜಯ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಮುಕ್ತಗೊಳಿಸಿತು.

ಪಾಕಿಸ್ತಾನಿ ಪಡೆಗಳ ವಿರುದ್ಧ ‘ಆಪರೇಷನ್: ವಿಜಯ್ ದಿವಸ(Vijay Diwas) ಅಂಗವಾಗಿ ಭಾರತೀಯ ಸಶಸ್ತ್ರ ಪಡೆಗಳ ವಿಜಯವನ್ನು ಸ್ಮರಿಸುತ್ತದೆ. ಯುದ್ಧದ ಸಮಯದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. 

1947 ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗಿನಿಂದ, ಹಲವು ಕಾರಣಗಳಿಗಾಗಿ ಉಭಯ ದೇಶಗಳ ನಡುವೆ ಇಂದಿನವರೆಗೆ ದ್ವೇಷವಿದೆ. ಈ ಕಾರಣಗಳಲ್ಲಿ ಒಂದು ಪೂರ್ವ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ. 1971 ರ ಯುದ್ಧಕ್ಕೆ ಕಾರಣವಾದ ಘಟನೆಗಳು ಭಾರತೀಯ ಪಡೆಗಳನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸಿತು; ಪಶ್ಚಿಮ ಪಾಕಿಸ್ತಾನದಲ್ಲಿ ನೆಲೆಸಿರುವ ಮುಸ್ಲಿಮೇತರರನ್ನು ಗುರಿಯಾಗಿಸಲಾಯಿತು. ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವು 13 ದಿನಗಳ ಕಾಲ ನಡೆಯಿತು, ಡಿಸೆಂಬರ್ 16, 1971 ರಂದು ಕೊನೆಗೊಂಡು ಬಾಂಗ್ಲಾದೇಶದ ಹೆಸರಿನಿಂದ ಹೊಸ ರಾಷ್ಟ್ರದ ವಿಮೋಚನೆಗೆ ಕಾರಣವಾಯಿತು. ಸುಮಾರು 93 ಸಾವಿರ ಪಾಕಿಸ್ತಾನಿ ಸೈನಿಕರನ್ನು ಶರಣಾಗುವಂತೆ ಮಾಡಿದ್ದು ಮತ್ತು ವಿಶ್ವದ ಭೂಪಟದ ರೂಪರೇಖೆಯನ್ನು ಬದಲಾಯಿಸಿದ್ದು ಭಾರತದ ಜಯವಾಗಿದೆ.

ಭಾರತೀಯ ಸೇನೆಗೆ ಅಂದು ಹೆಮ್ಮೆಯ ಕ್ಷಣ, ಎರಡನೇ ವಿಶ್ವಯುದ್ಧ ನಂತರ ಅವರ ಮೊದಲ ನಿರ್ಣಾಯಕ ವಿಜಯವಾಗಿದೆ. ಬಾಂಗ್ಲಾದೇಶಕ್ಕೂ ಈ ದಿನ ಮುಖ್ಯವಾಗಿದೆ. ಈ ದಿನವನ್ನು ಬಾಂಗ್ಲಾದೇಶದಲ್ಲಿ ‘ಬಿಜೋಯ್ ಡಿಬೋಸ್’ ಎಂದು ಆಚರಿಸಲಾಗುತ್ತದೆ.

ಗಣ್ಯರ ಸ್ಮರಣೆ: ಪಾಕಿಸ್ತಾನದಿಂದ ಬಾಂಗ್ಲಾದೇಶದ ವಿಮೋಚನೆಯ, ಭಾರತೀಯ ಸೇನೆಯ ಸೈನಿಕರ ವಿಜಯದ ದಿವಸವನ್ನು ಇಂದು ದೇಶಾದ್ಯಂತ ಗಣ್ಯರು ಸ್ಮರಿಸುತ್ತಿದ್ದಾರೆ. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವರು ಭಾರತೀಯ ಸೇನೆಯ ಹುತಾತ್ಮ ಯೋಧರ ತ್ಯಾಗ, ಬಲಿದಾನಗಳನ್ನು ಕೊಂಡಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT