ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಪ್ರದೇಶ: ಶಾಲಾ ಬಸ್ ಪಲ್ಟಿ, ಓರ್ವ ಸಾವು, 8 ವಿದ್ಯಾರ್ಥಿಗಳು ಸೇರಿ 9 ಮಂದಿಗೆ ಗಾಯ

ಸೈಕಲ್ ಸವಾರನಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 10 ಅಡಿ ಆಳದ ಹೊಂಡಕ್ಕೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ...

ಗೋರಖ್‌ಪುರ: ಸೈಕಲ್ ಸವಾರನಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 10 ಅಡಿ ಆಳದ ಹೊಂಡಕ್ಕೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖೋರಬಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಭೈಂಸಾ ಧೋಡಾ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸೈಕಲ್ ಸವಾರ ತಿಲಕಧಾರಿ(50) ಮೃತಪಟ್ಟಿದ್ದು, ಬಸ್ ಚಾಲಕ ಧರ್ಮೇಂದ್ರ ಯಾದವ್(28) ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

62 ಪ್ರಯಾಣಿಕರಿದ್ದ ಬಸ್ ಡಿಯೋರಿಯಾದಿಂದ ಗೋರಖ್‌ಪುರಕ್ಕೆ ಹೋಗುತ್ತಿತ್ತು ಎಂದು ಶಾಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 10 ಅಡಿ ಆಳದ ಹೊಂಡಕ್ಕೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಬಸ್ ಚಾಲಕ ಹಾಗೂ ಎಂಟು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಖೋರಾಬರ್ ಠಾಣೆ ಮತ್ತು ರಾಮನಗರ ಕರ್ಜಹಾ ಪೋಸ್ಟ್‌ನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿ.ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ರಚನೆಗೆ ಇನ್ನೂ ಪ್ರಸ್ತಾವನೆ ಬಂದಿಲ್ಲ: ಮಲ್ಲಿಕಾರ್ಜುನ ಖರ್ಗೆ

T-20 ಮ್ಯಾಚ್ ನಂತೆ ಹೊಸ ಸರ್ಕಾರ: ಡಿಕೆ ಶಿವಕುಮಾರ್ ಆಕ್ಷನ್-ಪ್ಯಾಕ್ ಇನ್ನಿಂಗ್ಸ್; 'ಬಂಡೆ' 'ಪವರ್ ಪ್ಲೇ'- ಆಕ್ರಮಣಕಾರಿ ಬ್ಯಾಟಿಂಗ್!

IPL 2026 Final: RCB vs GT ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ, ಮ್ಯಾಚ್ ರದ್ದಾದರೆ ಯಾರು ಚಾಂಪಿಯನ್?

ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ರಾಜಕೀಯ ಹಿಂಸಾಚಾರ: ಅಭಿಷೇಕ್ ಬೆನ್ನಲ್ಲೇ ಕಲ್ಯಾಣ್ ಬ್ಯಾನರ್ಜಿ ಮೇಲೂ ದಾಳಿ, BJP ವಿರುದ್ಧ ಆರೋಪ..!

ಇರಾನ್ ಜೊತೆ ಶಾಂತಿ ಒಪ್ಪಂದದತ್ತ ಅಮೆರಿಕಾ; ಅಣ್ವಸ್ತ್ರ ತ್ಯಜಿಸಲು ಒಪ್ಪಿದ ಟೆಹ್ರಾನ್, ಟ್ರಂಪ್ ಮಹತ್ವದ ಹೇಳಿಕೆ..!

SCROLL FOR NEXT