ದೇಶ

ಕೋವಿಡ್ ಭೀತಿ: ಆಂಧ್ರ ಪ್ರದೇಶದ ಕಾಕಿನಾಡದಲ್ಲಿ 2 ವರ್ಷಗಳಿಂದ ಮನೆಯೊಳಗೆ ಇದ್ದ ತಾಯಿ-ಮಗಳು!

Sumana Upadhyaya

ಕಾಕಿನಾಡ(ಆಂಧ್ರ ಪ್ರದೇಶ): ಕೋವಿಡ್-19 ಎಂಬ ಮಹಾಮಾರಿ ಹಲವು ರೀತಿಯಲ್ಲಿ ಜನರ ಮೇಲೆ ಪ್ರಭಾವ ಬೀರಿದ್ದನ್ನು ನೋಡಿದ್ದೇವೆ. ವಿಚಿತ್ರವೆಂಬಂತೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ತಾಯಿ ಮತ್ತು ಮಗಳು ಕೋವಿಡ್ ಭಯದಿಂದ ತಮ್ಮ ಮನೆಯೊಳಗೆ ಎರಡು ವರ್ಷಗಳಿಂದ ಬಂಧಿಯಾಗಿದ್ದರು. 

ಹೊರಗೆ ಬಂದರೆ ಕೊರೋನಾ ಸೋಂಕು ತಾಗಿ ಪ್ರಾಣಕ್ಕೆ ಸಂಚಕಾರಬಹುದೆಂಬ ಭೀತಿಯಿಂದ ತಾಯಿ-ಮಗಳು ಬಾಗಿಲು ಹಾಕಿ ಮನೆಯೊಳಗೆ ಎರಡು ವರ್ಷಗಳಿಂದ ಉಳಿದುಕೊಂಡಿದ್ದರು. ವಿಷಯ ಆರೋಗ್ಯ ಇಲಾಖೆ ಸಿಬ್ಬಂದಿಗೆ ಗೊತ್ತಾಗಿ ಅವರು ಮನೆಗೆ ಹೋಗಿ ಬಾಗಿಲು ಒಡೆದು ಒತ್ತಾಯಪೂರ್ವಕವಾಗಿ ತಾಯಿ-ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ತಾಯಿ-ಮಗಳು ಹೆಲಿಯೋಫೋಬಿಯಾ ಮತ್ತು ಇತರ ಆತಂಕದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಶಂಕಿಸಿದ್ದಾರೆ.

SCROLL FOR NEXT