ದೇಶ

ಚೀನಾದಲ್ಲಿನ ಕೋವಿಡ್ ಪರಿಸ್ಥಿತಿ ಮೇಲೆ ಭಾರತದ ಕಣ್ಣು- ಎಂಇಎ

Nagaraja AB

ನವದೆಹಲಿ: ಚೀನಾದಲ್ಲಿ ದಿಢೀರ್ ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಆ ರಾಷ್ಟ್ರದ ಪರಿಸ್ಥಿತಿ ಮೇಲೆ  ಭಾರತ ಕಣ್ಣಿಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ, ಇತರ ರಾಷ್ಟ್ರಗಳಿಗೆ ಯಾವಾಗಲೂ ಔಷಧಗಳ ನೆರವು ನೀಡುತ್ತಾ ಬಂದಿದ್ದೇವೆ. ಪ್ರಯಾಣ ಮಾರ್ಗಸೂಚಿಯನ್ನು ಇನ್ನೂ ಹೊರಡಿಸಿಲ್ಲ. ಆದರೆ, ಜನರು ತಾವು ವಾಸಿಸುತ್ತಿರುವ ಕಡೆಗಳಲ್ಲಿ ದೇಶದಲ್ಲಿನ ಸ್ಥಳೀಯ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದರು. 

ಸಿಎಎ ವರದಿ ಪ್ರಕಾರ ಇತ್ತೀಚಿಗೆ ಚೀನಾದಲ್ಲಿ ಕೋವಿಡ್ ನಿಂದ ಸುಮಾರು 1 ಮಿಲಿಯನ್ ನಷ್ಟು ಜನರು ಸಾವನ್ನಪ್ಪಿದ್ದಾರೆ. ಈ ತಿಂಗಳು ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಚೀನಾದಲ್ಲಿನ ಪ್ರಮುಖ ನಗರಗಳಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಂಡಿದೆ.  

ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದಲೂ ವೈರಸ್ ಹರಡುವಿಕೆ ತಡೆಯಲು ಕಟ್ಟುನಿಟ್ಟಾದ ಲಾಕ್‌ಡೌನ್‌ಗಳು, ಸಾಮೂಹಿಕ ಪರೀಕ್ಷೆ ಮತ್ತು ಸೋಂಕು ಪತ್ತೆ ಕಾರ್ಯವನ್ನು ಚೀನಾ ಸರ್ಕಾರ ನಡೆಸುತ್ತಾ ಬಂದಿದೆ. 

 ಲಂಡನ್ ಮೂಲದ ಜಾಗತಿಕ ಆರೋಗ್ಯ ಗುಪ್ತಚರ ಮತ್ತು ವಿಶ್ಲೇಷಣಾ ಸಂಸ್ಥೆಯ ಪ್ರಕಾರ, ಕಡಿಮೆ ವ್ಯಾಕ್ಸಿನೇಷನ್  ಮತ್ತಿತರ ಕಾರಣದಿಂದಾಗಿ  ಚೀನಾದಲ್ಲಿ 1.3 ಮತ್ತು 2.1 ಮಿಲಿಯನ್ ಜೀವಗಳು ಅಪಾಯಕ್ಕೆ ಒಳಗಾಗಬಹುದು ಎಂದು ಹೇಳಿದೆ.

SCROLL FOR NEXT