ದೇಶ

ಆರು ದಿನ ಮುಂಚಿತವಾಗಿ ಸಂಸತ್ ಮುಂಗಾರು ಅಧಿವೇಶನ ಮುಕ್ತಾಯ: ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Nagaraja AB

ನವದೆಹಲಿ: ಈ ಬಾರಿಯ ಸಂಸತ್ ಮುಂಗಾರು ಅಧಿವೇಶನ ಆರು ದಿನ ಮುಂಚಿತವಾಗಿ ಮುಕ್ತಾಯವಾಗಿದೆ. ಡಿಸೆಂಬರ್ 7 ರಂದು ಆರಂಭವಾಗಿದ್ದ ಅಧಿವೇಶನ ಡಿಸೆಂಬರ್ 29ಕ್ಕೆ ಮುಗಿಯಬೇಕಿತ್ತು. ಆದರೆ, ಆರು ದಿನ ಮುಂಚಿತವಾಗಿ ಮುಕ್ತಾಯವಾಗಿದ್ದು, ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

 ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಸರ್ಕಾರದ ಪ್ರತಿನಿಧಿಗಳು, ವಿವಿಧ ಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ ಲೋಕಸಭಾ ಕಾರ್ಯ ಕಲಾಪ ಸಮಿತಿ ಸಭೆಯಲ್ಲಿ ಅಧಿವೇಶನದ ಅವಧಿಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಸದನ ಅನಿರ್ದಿಷ್ಟಾವಧಿಗೆ ಮುಂದೂಡುವ ಮುನ್ನಾ ಮಾತನಾಡಿದ  ಸ್ಪೀಕರ್ ಓಂ ಬಿರ್ಲಾ  ಮುಂಗಾರು ಸಂಸತ್ ಅಧಿವೇಶನ ಶೇ. 97 ರಷ್ಟು ಫಲಪ್ರಧವಾಗಿದೆ ಎಂದು ತಿಳಿಸಿದರು.

ಸದನವು ಒಟ್ಟು 62 ಗಂಟೆ 42 ನಿಮಿಷಗಳ ಕಾಲ 13 ಸಭೆಗಳನ್ನು ನಡೆಸಿತು.  ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸದನದಲ್ಲಿ ಉಪಸ್ಥಿತರಿದ್ದರು ಎಂದು ಅವರು ವಿವರಿಸಿದರು. 

SCROLL FOR NEXT