ದೇಶ

ಒಬಿಸಿಗಳ ಜಾತಿ ಆಧಾರಿತ ಜನಗಣತಿ; ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್

Ramyashree GN

ನವದೆಹಲಿ: ಮುಂಬರುವ ಜನಗಣತಿಯಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜಾತಿ ಆಧಾರಿತ ಜನಗಣತಿಯನ್ನು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಒಬಿಸಿಗಳ ಜಾತಿ ಆಧಾರಿತ ಜನಗಣತಿ ಇಲ್ಲದಿರುವುದರಿಂದ ಸರ್ಕಾರವು ಅವರಿಗೆ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಅರ್ಜಿಗೆ ಸಂಬಂಧಿಸಿದಂತೆ, ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.

ನಿರ್ದಿಷ್ಟ ಮಾಹಿತಿಯ ಅನುಪಸ್ಥಿತಿಯಲ್ಲಿ ಕಾಂಕ್ರೀಟ್ ನೀತಿಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದು ವಕೀಲ ಕೃಷ್ಣ ಕನ್ಹಯ್ಯಾ ಪಾಲ್ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

2021ರ ಜನಗಣತಿಯ ಸಮಯದಲ್ಲಿ ಒಬಿಸಿಗಳ ಜನಗಣತಿಯನ್ನು ನಡೆಸಲಾಗುವುದು ಎಂದು ಆಗಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರೂ, ಸರ್ಕಾರವು ಅದನ್ನು ರೋಹಿಣಿ ಆಯೋಗದ ಮುಂದೆ ಮಂಡಿಸುವುದರಿಂದ ದೂರ ಉಳಿದಿತ್ತು.

ದೆಹಲಿ ಹೈಕೋರ್ಟ್ ಮಾಜಿ ನ್ಯಾಯಾಧೀಶರಾದ ಜಿ ರೋಹಿಣಿ ನೇತೃತ್ವದ ಸಮಿತಿಯನ್ನು 2017 ರಲ್ಲಿ ಮೀಸಲಾತಿಯ ಪ್ರಯೋಜನಗಳು ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಒಬಿಸಿ ಸಮುದಾಯಗಳನ್ನು ಉಪವರ್ಗೀಕರಿಸಲು ಸ್ಥಾಪಿಸಲಾಯಿತು.

ಜಾತಿ ಜನಗಮತಿಯ ವಿರೋಧಿಗಳಿಗೆ ಯಾವುದೇ ಹೊಸ ವಾದದ ಕೊರತೆಯಿದೆ. ಅವರು ಅದೇ ಭಯದ ಮನೋವಿಕಾರವನ್ನು ಪುನರಾವರ್ತಿಸುತ್ತಿದ್ದಾರೆ. ಅದು ಜಾತೀಯತೆಯನ್ನು ಬೆಳೆಸುತ್ತದೆ, ಸಮಾಜವನ್ನು ವಿಭಜಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಜಾತಿ ಆಧಾರಿತ ಕೋಟಾಗಳನ್ನು ಹೆಚ್ಚಿಸುತ್ತದೆ. ಇದನ್ನು ಜಾತಿಯ ಸುತ್ತ ಕೇಂದ್ರೀಕೃತವಾಗಿರುವ ಪ್ರತಿಯೊಂದು ಪ್ರಗತಿಪರ ಕ್ರಮಗಳ ವಿರುದ್ಧ ಬಳಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

SCROLL FOR NEXT