ದೇಶ

ಪುನರ್ವಸತಿ ಕಲ್ಪಿಸದಿರುವುದು ಸರ್ಕಾರದ ಕಾರ್ಯವೈಖರಿಯ ದೊಡ್ಡ ವೈಫಲ್ಯ: ಜಮ್ಮುವಿನಲ್ಲಿ ಪ್ರತಿಭಟನೆಗಿಳಿದ ಕಾಶ್ಮೀರಿ ಪಂಡಿತರು

Manjula VN

ಜಮ್ಮು: ಪುನರ್ವಸತಿ ವಿಚಾರ ಸಂಬಂಧ ಸರ್ಕಾರದ ವಿರುದ್ಧ ಜಮ್ಮುವಿನಲ್ಲಿ ಕಾಶ್ಮೀರಿ ಪಂಡಿತರು ಸೋಮವಾರ ಪ್ರತಿಭಟನೆಗಿಳಿದಿದ್ದಾರೆ.

1989ರಲ್ಲಿ ಕಾಶ್ಮೀರದ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳು ಬಂದೂಕು ಹಿಡಿದು ಸರ್ಕಾರದ ವಿರುದ್ಧ ಕಾರ್ಯಾಚರಣೆ ನಡೆಸಿದಾಗ ಕಾಶ್ಮೀರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಶ್ಮೀರಿ ಪಂಡಿತರು ವಲಸೆ ಬಂದಿದ್ದರು. ಸರ್ಕಾರವು ಈ ಪಂಡಿತರಿಗೆ ಉಧಂಪುರ ಮತ್ತು ಜಮ್ಮುವಿನಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿತ್ತು. ಅದಲ್ಲದೇ ಇತರ ಅನೇಕ ಪಂಡಿತರು ದೇಶದ ವಿವಿಧ ನಗರಗಳಿಗೆ ವಲಸೆ ಹೋಗಿದ್ದರು.

ಒಂದೆಡೆ ಪಂಡಿತರ ಪುನರ್ವಸತಿಗಾಗಿ ಸಾವಿರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸರಕಾರ ಹೇಳುತ್ತಿದ್ದರೆ, ಇನ್ನೊಂದೆಡೆ ಸರ್ಕಾರ ಪಂಡಿತರಿಗೆ ಪುನರ್ವಸತಿ ಕಲ್ಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಡಿತರು ಆರೋಪಿಸಿದ್ದಾರೆ.

ಪ್ರತಿಭಟನೆ ವೇಳೆ ಕಾಶ್ಮೀರಿ ಪಂಡಿತರು, ಪುನರ್ವಸತಿ ಕಲ್ಪಿಸದಿರುವುದು ಸರ್ಕಾರದ ಕಾರ್ಯವೈಖರಿಯ ದೊಡ್ಡ ವೈಫಲ್ಯವಾಗಿದೆ. ನಮ್ಮದೇ ದೇಶದಲ್ಲಿ ನಾವು ಶಿಕ್ಷೆಗೊಳಗಾಗಿದ್ದೇವೆ. ದೊಡ್ಡ ಹತ್ಯಾಕಾಂಡಕ್ಕೆ ಸರ್ಕಾರ ಕಾಯುತ್ತಿದೆಯೇ? ಕಾಶ್ಮೀರದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತರಾಗಿದ್ದಾರೆಂಬ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿದ್ದಾರೆ.

SCROLL FOR NEXT