ದೇಶ

ತಮಿಳುನಾಡಿಗೆ ಸುನಾಮಿ ಅಪ್ಪಳಿಸಿ 18 ವರ್ಷ: 2004ರಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಕಡಲ ತೀರದ ಜನರು

Ramyashree GN

ಚೆನ್ನೈ: 2004ರಲ್ಲಿ ತಮಿಳುನಾಡಿನಲ್ಲಿ ಸಂಭವಿಸಿದ ಸುನಾಮಿ ಅಲೆಯಲ್ಲಿ ಬಲಿಯಾದವರಿಗೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಜನರು ಸೋಮವಾರ ಶ್ರದ್ಧಾಂಜಲಿ ಸಲ್ಲಿಸಿದರು.

ಚೆನ್ನೈನಿಂದ ಕನ್ಯಾಕುಮಾರಿವರೆಗಿನ ಕಡಲ ತೀರದ ದಡದಲ್ಲಿ ವಾಸಿಸುವ ಜನರು ಸಮುದ್ರತೀರಕ್ಕೆ ಮೌನ ಮೆರವಣಿಗೆ ನಡೆಸಿದರು ಮತ್ತು ಸಮುದ್ರಕ್ಕೆ ಹಾಲು ಎರೆದು ಮತ್ತು ಹೂವುಗಳನ್ನು ಎರಚುವ ಮೂಲಕ ಕಣ್ಣೀರಿನ ಶ್ರದ್ಧಾಂಜಲಿ ಸಲ್ಲಿಸಿದರು.

2004 ರ ಡಿಸೆಂಬರ್ 26 ಮುಂಜಾನೆ ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಬಳಿ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸಾವಿರಾರು ಜನರನ್ನು ಕೊಂದ ಸುನಾಮಿಗೆ ಕಾರಣವಾಯಿತು. ಕ್ರಿಸ್‌ಮಲ್ ಆಚರಿಸಲು ವೆಲಂಕಣಿಗೆ ತರಳಿದ್ದ ಹಲವಾರು ಮೀನುಗಾರರು ಮತ್ತು ಅಪಾರ ಸಂಖ್ಯೆಯ ನಾಗರಿಕರು ದುರಂತದಿಂದಾಗಿ ಸಾವಿಗೀಡಾಗಿದ್ದರು.

ಸುಮಾರು 6,065 ಜನರು ಮೃತಪಟ್ಟಿದ್ದ ನಾಗಪಟ್ಟಣಂ ಜಿಲ್ಲೆಯಲ್ಲಿ ಮೀನುಗಾರರು, ಸಾರ್ವಜನಿಕರು, ವ್ಯಾಪಾರಸ್ಥರು ಮತ್ತು ರಾಜಕೀಯ ಪಕ್ಷದ ಸದಸ್ಯರೊಂದಿಗೆ ಬೃಹತ್ ಮೆರವಣಿಗೆ ನಡೆಸಿ ಅಕ್ಕರೈಪೆಟ್ಟೈನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಸುನಾಮಿಯಿಂದಾಗಿ ಅನೇಕ ಮಕ್ಕಳು ಅನಾಥರಾಗಿದ್ದರು ಮತ್ತು ಕೆಲವು ಸಂದರ್ಭಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ.

18ನೇ ವರ್ಷಾಚರಣೆ ಅಂಗವಾಗಿ ಕಡಲೂರು, ತೂತುಕುಡಿ, ಕನ್ಯಾಕುಮಾರಿ ಭಾಗದ ಮೀನುಗಾರರು ಸಮುದ್ರಕ್ಕೆ ಹಾಲು ಎರೆದು ಹೂ ಎರಚುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ನಾಗೂರಿನಲ್ಲಿ ದರ್ಗಾ ಒಡೆತನದ ಜಮೀನಿನಲ್ಲಿ ಸಾಮೂಹಿಕ ಸಮಾಧಿ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ದಕ್ಷಿಣ ಭಾರತೀಯ ಮೀನುಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಕು ಭಾರತಿ ಅವರ ಪ್ರಕಾರ, ಹಲವಾರು ಸ್ಥಳಗಳಲ್ಲಿ ಮೇಣದಬತ್ತಿಗಳನ್ನು ಬೆಳಗಿಸಿ ಸಂತ್ರಸ್ತರ ಫೋಟೋಗಳನ್ನು ಹೊಂದಿರುವ ಬ್ಯಾನರ್ ಮತ್ತು ಹೋರ್ಡಿಂಗ್‌ಗಳನ್ನು ಹಾಕಲಾಯಿತು.

SCROLL FOR NEXT