ದೇಶ

ಅವನತಿಯ ಕಡೆಗೆ ಪ್ರಯಾಣ ಪ್ರಾರಂಭ: ಉದ್ಧವ್ ರಾಜೀನಾಮೆ ಬಳಿಕ ಟ್ವೀಟ್ ನಲ್ಲಿ ಕೆಣಕಿದ ರಾಜ್ ಠಾಕ್ರೆ!

Shilpa D

ಮುಂಬೈ: ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಮರುದಿನ ಅವರ ಸೋದರ ಸಂಬಂಧಿ, ರಾಜಕೀಯ ವಿರೋಧಿ ರಾಜ್ ಠಾಕ್ರೆ ಟ್ವೀಟ್ ಮಾಡಿದ್ದು ಉದ್ಧವ್ ಠಾಕ್ರೆ ಅವರನ್ನ ಕೆಣಕಿದ್ದಾರೆ.

ಯಾರಾದರೂ ಒಬ್ಬರ ಅದೃಷ್ಟವನ್ನು ಒಬ್ಬರ ವೈಯಕ್ತಿಕ ಸಾಧನೆ ಎಂದು ತಪ್ಪಾಗಿ ಅರ್ಥೈಸಿಕೊಂಡಾಗ, ಅವನ ಅವನತಿಯ ಕಡೆಗೆ ಪ್ರಯಾಣ ಪ್ರಾರಂಭವಾಗುತ್ತದೆ ಎಂದು ರಾಜ್ ಠಾಕ್ರೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ರಾಜ್ ಠಾಕ್ರೆ ಅವರು ಶಿವಸೇನೆ ವಿರುದ್ಧ ಬಂಡಾಯವೆದ್ದು ಸುಮಾರು ಎರಡು ದಶಕಗಳ ಹಿಂದೆ ತಮ್ಮದೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು (ಎಂಎನ್‌ಎಸ್) ಸ್ಥಾಪಿಸಿದರು. ರಾಜ್ ಠಾಕ್ರೆಯವರ ತಂದೆ ಶ್ರೀಕಾಂತ್ ಠಾಕ್ರೆ, ಉದ್ಧವ್ ಠಾಕ್ರೆಯವರ ತಂದೆ ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆಯವರ ಕಿರಿಯ ಸಹೋದರ.  ಕಿಡಿ ಭಾಷಣಗಳು ಮತ್ತು ಆಕ್ರಮಣಕಾರಿ ವಾಕ್ಚಾತುರ್ಯಕ್ಕೆ ಹೆಸರುವಾಸಿಯಾದ ರಾಜ್ ಠಾಕ್ರೆ ಸೌಮ್ಯ ಸ್ವಭಾವದ ಉದ್ಧವ್ ಠಾಕ್ರೆಗೆ ವಿರುದ್ಧವಾಗಿ ಅವರ ದೊಡ್ಡಪ್ಪನ ಉತ್ತರಾಧಿಕಾರಿಯಾಗಿ ಕಂಡುಬಂದರು.

ಆದರೆ ಎಂಟು ವರ್ಷ ಹಿರಿಯರಾದ ಉದ್ಧವ್ ಠಾಕ್ರೆ ಅವರನ್ನು 2000 ರ ದಶಕದ ಮಧ್ಯಭಾಗದಲ್ಲಿ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದಾಗ ಕೆರಳಿ 2005 ರ ಕೊನೆಯಲ್ಲಿ ಕುಟುಂಬ ನೇತೃತ್ವದ ಪಕ್ಷವನ್ನು ತೊರೆದರು.

SCROLL FOR NEXT