ದೇಶ

ಮಹಾರಾಷ್ಟ್ರ ವ್ಯವಸ್ಥೆ ಬಗ್ಗೆ ತೀವ್ರ ಬೇಸರಗೊಂಡು ಐಎಎಸ್ ಹುದ್ದೆ ತ್ಯಜಿಸಿದ ಅಧಿಕಾರಿ!

Lingaraj Badiger

ಪುಣೆ: ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆ (ಎಂಇಡಿಡಿ) ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ 2008ರ ಬ್ಯಾಚ್‌ನ ಐಎಎಸ್ ಅಧಿಕಾರಿ ದೌಲತ್ ದೇಸಾಯಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದು, ವ್ಯವಸ್ಥೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

MEDDಗೆ ವರ್ಗಾವಣೆಯಾಗುವ ಮೊದಲು ಅವರು ಕೊಲ್ಲಾಪುರದ ಕಲೆಕ್ಟರ್ ಆಗಿದ್ದರು ಮತ್ತು ಪಶ್ಚಿಮ ಮಹಾರಾಷ್ಟ್ರ ಜಿಲ್ಲೆಯನ್ನು ಕಾಡಿದ್ದ 2019 ರ ಪ್ರವಾಹ ಸ್ಥಿತಿಯನ್ನು ನಿಭಾಯಿಸಿದ್ದರು.

ಮಿಶ್ರ ಭಾವನೆಗಳ ನಡುವೆ ನಾನು ರಾಜೀನಾಮೆ ನೀಡಿದ್ದೇನೆ ಮತ್ತು ಸ್ವಯಂಪ್ರೇರಣೆಯಿಂದ ಹೊರನಡೆದಿದ್ದೇನೆ ಎಂದು ನಾನು ನಿಮಗೆ ತಿಳಿಸುತ್ತೇನೆ. ಉಕ್ಕಿನ ಚೌಕಟ್ಟು ಎಂದು ಕರೆಯಲ್ಪಡುವ ಭಾರತೀಯ ಆಡಳಿತ ಸೇವೆ (IAS), ಅಧಿಕಾರ, ಭದ್ರತೆ, ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಬಿಟ್ಟುಬಿಟ್ಟಿದ್ದೇನೆ!. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಅತ್ಯಂತ ಸವಾಲಿನ ಅಧಿಕಾರಾವಧಿಯನ್ನು ಸಾಧಿಸಿದ ನಂತರವೂ ಹಿತ್ತಲಿನಲ್ಲಿ ಬಿದ್ದಿರುವುದು ಸಾಕಷ್ಟು ಖಿನ್ನತೆಯನ್ನುಂಟುಮಾಡಿದೆ ಎಂದು ದೌಲತ್ ದೇಸಾಯಿ ಪೋಸ್ಟ್ ನಲ್ಲಿ ಹೇಳಿದ್ದಾರೆ.

ನಾಗರಿಕ ಸೇವೆಯು ಅವರಿಗೆ ದೇಶದ ಜನರ ಸೇವೆ ಮಾಡಲು ಅಪಾರ ಮಾನ್ಯತೆ, ಮನ್ನಣೆ ಮತ್ತು ಅವಕಾಶಗಳನ್ನು ನೀಡಿದೆ ಎಂದಿರುವ ಅವರು, “ನಾನು ಕೆಲವೇ ಕೆಲವರಲ್ಲಿ ಒಬ್ಬನಾಗಲು ತುಂಬಾ ಅದೃಷ್ಟಶಾಲಿಯಾಗಿದ್ದೆ! ಇದು ಆಶ್ಚರ್ಯಗಳು ಮತ್ತು ಯಶಸ್ಸಿನಿಂದ ತುಂಬಿದ ಅತ್ಯಂತ ತೃಪ್ತಿಕರ ಮತ್ತು ಉತ್ತೇಜಕ ಪ್ರಯಾಣವಾಗಿತ್ತು” ಎಂದು ಹೇಳಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅಪಾಯದಲ್ಲಿದ್ದರೆ ತಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

14 ವರ್ಷಗಳ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಐಎಎಸ್ ಅಧಿಕಾರಿ ದೌಲತ್ ದೇಸಾಯಿ ವಿಪತ್ತು ನಿರ್ವಹಣೆಯ ನಿರ್ದೇಶಕರಾಗಿ, ಪುಣೆ ಜಿಲ್ಲಾ ಪರಿಷತ್ತಿನ ಸಿಇಒ ಆಗಿ ಸೇವೆ ಸಲ್ಲಿಸಿದ್ದರು.

SCROLL FOR NEXT