ದೇಶ

ಭೂ ಕುಸಿತ: ಗೋವಾ-ಅನ್ಮೋಡ್ ರಸ್ತೆ ಬಂದ್!

Srinivas Rao BV

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮೂಲಕ ಹಾದು ಹೋಗುವ ಗೋವಾ-ಅನ್ಮೋಡ್ ನ ಎನ್ ಹೆಚ್4A ರಸ್ತೆಯನ್ನು ಬಂದ್ ಮಾಡಲಾಗಿದೆ.

ಸರಣಿ ಭೂಕುಸಿತದ ಪರಿಣಾಮ ಮರಗಳ ಧರೆಗುರುಲಿ, ಮಣ್ಣು ಕುಸಿದಿತ್ತು ಹಾಗೂ ಸೋಮವಾರದಿಂದ ವಾಹನಗಳು ಮುಂದೆ ಹೋಗಲು ಸಾಧ್ಯವಾಗದೇ ನಿಂತಲ್ಲೇ ನಿಂತಿರುವ ಕಾರಣದಿಂದಾಗಿ ರಸ್ತೆಯನ್ನು ಬಂದ್ ಮಾಡಲಾಗಿದೆ.
 
ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಮೊದಲ ಭೂಕುಸಿತ ಗೋವಾ ಗಡಿಯ ದೂದ್ ಸಾಗರ್ ದೇವಾಲಯದಲ್ಲಿ ಬೆಳಿಗ್ಗೆ 9 ಗಂಟೆಗೆ ಉಂಟಾಯಿತು. ಈ ವೇಳೆ ರಸ್ತೆಯ ಮೇಲೆ ಬೃಹತ್ ಬಂಡೆ ಉರಿಳಿದ್ದು ಭೂ ಕುಸಿತ ಹಾಗೂ ವೇಗವಾಗಿ ಬೀಸುತ್ತಿದ್ದ ಗಾಳಿ ಹಲವು ಮರಗಳನ್ನು ಧರಾಶಾಹಿಯನ್ನಾಗಿಸಿದೆ. 

ಅನ್ಮೋಡ್ ಹಾಗೂ ಗೋವಾದ ರಸ್ತೆಯಲ್ಲಿ ಸ್ಥಳೀಯ ಅಧಿಕಾರಿಗಳು ಸಮರೋಪಾದಿಯಲ್ಲಿ ರಸ್ತೆಯ ಮೇಲಿನ ಅಡೆತಡೆಗಳನ್ನು ತೆರವುಗೊಳಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, ಜೋಯ್ಡಾ ಅನ್ಷಿ ಪ್ರದೇಶಗಳಲ್ಲಿ ಭೂಕುಸಿತ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಅರ್ತ್ ಮೂವರ್ ಗಳು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ತೆರವು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಪ್ರಮಾಣದಲ್ಲಿ ಬೃಹತ್ ಭೂಕುಸಿತ ಉಂಟಾಗುತ್ತಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT