ದೇಶ

18 ದಿನಗಳಲ್ಲಿ 8 ಬಾರಿ ತಾಂತ್ರಿಕ ದೋಷ: ಸ್ಪೈಸ್ ಜೆಟ್ ಗೆ ಡಿಜಿಸಿಎ ಶೋಕಾಸ್ ನೊಟೀಸ್!

Srinivas Rao BV

ವೈಮಾನಿಕ ನಿಯಂತ್ರಕ ಡಿಜಿಸಿಎ ಸ್ಪೈಸ್ ಜೆಟ್ ವಿಮಾನ ಸಂಸ್ಥೆಗೆ ನೊಟೀಸ್ ಜಾರಿ ಮಾಡಿದೆ. 

ಸಂಸ್ಥೆಯ ವಿಮಾನಗಳಲ್ಲಿ 18 ದಿನಗಳ ಅವಧಿಯಲ್ಲಿ 8 ಬಾರಿ ತಾಂತ್ರಿಕ ದೋಷ ವರದಿಯಾಗಿದ್ದ ಹಿನ್ನೆಲೆಯಲ್ಲಿ ಈ ನೊಟೀಸ್ ಜಾರಿಗೊಳಿಸಲಾಗಿದೆ. 

ಏರ್ಕ್ರಾಫ್ಟ್ ನಿಯಮಗಳ ರೂಲ್ 134 ಹಾಗೂ ಷೆಡ್ಯೂಲ್ XI, 1937 ರ ಪ್ರಕಾರ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ವಾಯು ಸೇವೆಗಳನ್ನು ಸ್ಥಾಪಿಸುವುದಕ್ಕೆ ಸ್ಪೈಸ್ ಜೆಟ್ ವಿಫಲವಾಗಿದೆ ಎಂದು ಡಿಜಿಸಿಎ ನೀಡಿರುವ ನೊಟೀಸ್ ನಲ್ಲಿ ಹೇಳಿದೆ.ಘಟನೆಯ ಪರಿಶೀಲನೆ ಮೂಲಕ ಆಂತರಿಕ ಸುರಕ್ಷತೆ ಕಳಪೆಯಾಗಿರುವುದು ಹಾಗೂ ಅಸಮರ್ಪಕ ನಿರ್ವಹಣೆ ಕ್ರಮಗಳನ್ನು ತೋರುತ್ತಿದೆ ಎಂದು ಡಿಜಿಸಿಎ ಹೇಳಿದೆ. 

ನೊಟೀಸ್ ಗೆ ಪ್ರತಿಕ್ರಿಯೆ ನೀಡುವುದಕ್ಕೆ ವಿಮಾನ ಸಂಸ್ಥೆಗೆ ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ. ಸೆಪ್ಟೆಂಬರ್ 2021 ರಲ್ಲಿ ಡಿಜಿಸಿಎ ನಡೆಸಿದ ಫೈನಾನ್ಷಿಯಲ್ ಅಸೆಸ್ಮೆಂಟ್ ನಲ್ಲಿ ವಿಮಾನ ಸಂಸ್ಥೆ ಕ್ಯಾಷ್-ಕ್ಯಾರಿ ಮಾದರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ವೆಂಡರ್ ಗಳಿಗೆ ನಿಯಮಿತವಾಗಿ ಪಾವತಿ ಮಾಡಲಾಗುತ್ತಿಲ್ಲ ಪರಿಣಾಮವಾಗಿ ಬಿಡಿಭಾಗಗಳ ಕೊರತೆ ಮತ್ತು MEL (ಮಿನಿಮಮ್ ಎಕ್ವಿಪ್ಮೆಂಟ್ ಲಿಸ್ಟ್) ಗಳು ಆಗಾಗ್ಗೆ ಎದುರಾಗುತ್ತಿರುತ್ತದೆ ಎಂದು ನೊಟೀಸ್ ಹೇಳಿದೆ. 

SCROLL FOR NEXT