ದೇಶ

ಓಮಿಕ್ರಾನ್ ನ ಮತ್ತೊಂದು ಉಪತಳಿ ಭಾರತದಂತಹ ರಾಷ್ಟ್ರಗಳಲ್ಲಿ ಪತ್ತೆ: ಡಬ್ಲ್ಯುಹೆಚ್ಒ 

Srinivas Rao BV

ನವದೆಹಲಿ: ಕೊರೋನಾದ ಓಮಿಕ್ರಾನ್ ನ ಉಪತಳಿ ಬಿಎ.2.75 ಭಾರತದಂತಹ ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ನಿಗಾ ವಹಿಸಿದೆ ಎಂದು ಪ್ರಧಾನ ನಿರ್ದೇಶಕ ಟೆಡ್ರೋಸ್ ಅದನಂ ಘೆಬ್ರೆಯೆಸಸ್ ಹೇಳಿದ್ದಾರೆ.

ಕಳೆದ 2 ವಾರಗಳಲ್ಲಿ ಜಾಗತಿಕ ಮಟ್ಟದಲ್ಲಿ ಕೋವಿಡ್-19 ಪ್ರಕರಣಗಳು ಹತ್ತಿರ ಹತ್ತಿರ ಶೇ.30 ರಷ್ಟು ಏರಿಕೆ ಕಂಡಿವೆ. ಡಬ್ಲ್ಯುಹೆಚ್ಒ ನ ಉಪ ಉಪ-ಪ್ರದೇಶಗಳ ಪೈಕಿ 6 ರಲ್ಲಿ 4 ಕಡೆ ಕಳೆದ ವಾರದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆ ಕಂಡಿವೆ ಎಂದು ಘೆಬ್ರೆಯೆಸಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಯುರೋಪ್ ಹಾಗೂ ಅಮೇರಿಕಗಳಲ್ಲಿ ಬಿಎ.4 ಹಾಗೂ ಬಿಎ.5 ತಳಿಗಳ ಸೋಂಕಿನ ಅಲೆಗಳಿದ್ದು, ಭಾರತದಂತಹ ದೇಶಗಳಲ್ಲಿ ಓಮಿಕ್ರಾನ್ ನ ಹೊಸ ಉಪತಳಿ ಬಿಎ.2.75 ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೋನಾ ಹೆಚ್ಚಳ: ಇಂದು ಬೆಂಗಳೂರಿನಲ್ಲಿ 1053 ಸೇರಿ ರಾಜ್ಯದಲ್ಲಿ 1127 ಮಂದಿಗೆ ಪಾಸಿಟಿವ್; ಸಾವು ಶೂನ್
ಹೊಸ ಉಪತಗಳಿಗಳಲ್ಲಿ ಕೆಲವು ಮಾರ್ಪಾಡುಗಳಾಗಿದ್ದು, ಇದನ್ನು ಗಮನಿಸಬೇಕು  ಹೊಸ ಉಪತಳಿ ಇನ್ನೂ ಹೆಚ್ಚುವರಿಯಾಗಿ ಮಾನವನ ರೋಗನಿರೋಧಕ ಶಕ್ತಿಯನ್ನು ಮೀರಿ ಸೋಂಕು ತಗುಲಿಸುತ್ತದೆಯೇ ಎಂಬುದರ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ಡಬ್ಲ್ಯುಹೆಚ್ಒ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

SCROLL FOR NEXT