ದೇಶ

ರಾಷ್ಟ್ರಪತಿ ಚುನಾವಣೆ ವಿಷಯವಾಗಿ ಶಿವಸೇನೆಯ 13 ಸಂಸದರ ಸಭೆ: ಮುರ್ಮುಗೆ ಹೆಚ್ಚು ಸದಸ್ಯರ ಬೆಂಬಲ 

Srinivas Rao BV

ಮುಂಬೈ: ರಾಷ್ಟ್ರಪತಿ ಚುನಾವಣೆ ವಿಷಯವಾಗಿ ಶಿವಸೇನೆಯ 18 ಸಂಸದರ ಪೈಕಿ 13 ಮಂದಿ ಜು.11 ರಂದು ಮಹಾರಾಷ್ಟ್ರದಲ್ಲಿ ಸಭೆ ನಡೆಸಿದ್ದಾರೆ. 

ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ ಹೆಚ್ಚಿನ ಸದಸ್ಯರು ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ನಾಯಕ ಗಜಾನನ್ ಕಿರಿತ್ಕರ್ ಹೇಳಿದ್ದಾರೆ. ಆದರೆ ಪಕ್ಷದ ಸಂಸದರೂ ಆಗಿರುವ ಮುಖ್ಯ ವಕ್ತಾರ ಸಂಜಯ್ ರೌತ್, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.
 
ಮಹಾರಾಷ್ಟ್ರವಲ್ಲದೇ ಶಿವಸೇನೆ ಸಂಸದರು ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ನಗರ್ ಹವೇಲಿ, ದಾಮನ್ ಹಾಗೂ ಡಿಯುಗಳಲ್ಲೂ ಇದ್ದಾರೆ. 13 ಸಂಸದರಷ್ಟೇ ಭಾಗಿಯಾದರೂ ಸಭೆಗೆ ಹಾಜರಾಗದೇ ಇದ್ದ ಉಳಿದ ಸಂಸದರ ಪೈಕಿ ಸಂಜಯ್ ಜಾದವ್, ಸಂಜಯ್ ಮಂಡಲಿಕ್, ಹೇಮಂತ್ ಪಾಟೀಲ್ ಸಭೆಗೆ ಬರಲು ಸಾಧ್ಯವಾಗದೇ ಇದ್ದರೂ ಅವರ ಬೆಂಬಲವನ್ನು ನಾಯಕತ್ವಕ್ಕೆ ವ್ಯಕ್ತಪಡಿಸಿದ್ದಾರೆ ಎಂದು ಕಿರಿತ್ಕರ್ ಹೇಳಿದ್ದಾರೆ.

ಶಿವಸೆನೆಯ ಇಬ್ಬರು ಲೋಕಸಭಾ ಸದಸ್ಯರು ಭಾವನ ಗವಾಲಿ ಹಾಗೂ ಸಿಎಂ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಸಭೆಯಲ್ಲಿ ಭಾಗಿಯಾಗಲಿಲ್ಲ. ಜು.18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.

SCROLL FOR NEXT