ಸಂಸತ್ತು 
ದೇಶ

ಲೋಕಸಭೆ, ರಾಜ್ಯಸಭೆಯಲ್ಲಿ ಇನ್ಮುಂದೆ 'ಡ್ರಾಮ', 'ಹಿಪೊಕ್ರೆಸಿ', 'ಜೂಮ್ಲಾ ಜೀವಿ', 'ಕರಪ್ಟ್' ನಂತಹ ಪದಬಳಕೆ ಅಸಂಸದೀಯ!

'ಜುಮ್ಲಜೀವಿ', ಬಾಲ್ ಬುದ್ಧಿ, ಕೋವಿಡ್ ಸ್ಪ್ರೆಡರ್, ಸ್ನೂಪ್ ಗೇಟ್ ನಂತಹ ಶಬ್ದಗಳು ಹಾಗೆಯೇ ಸಾಮಾನ್ಯವಾಗಿ ಬಳಕೆ ಮಾಡುವ ಅಶೇಮ್ಡ್, ಅಬ್ಯೂಸ್ಡ್, ಬಿಟ್ರೇಯ್ಡ್ , ಕರಪ್ಟ್, ಡ್ರಾಮಾ, ಹೈಪೊಕ್ರಸಿ, ಇನ್ಕಾಪಿಟೆಂಟ್ ಶಬ್ದಗಳನ್ನು ಇನ್ನು ಮುಂದೆ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಳಸುವಂತಿಲ್ಲ.

ನವದೆಹಲಿ: 'ಜುಮ್ಲಜೀವಿ', ಬಾಲ್ ಬುದ್ಧಿ, ಕೋವಿಡ್ ಸ್ಪ್ರೆಡರ್, ಸ್ನೂಪ್ ಗೇಟ್ ನಂತಹ ಶಬ್ದಗಳು ಹಾಗೆಯೇ ಸಾಮಾನ್ಯವಾಗಿ ಬಳಕೆ ಮಾಡುವ ಅಶೇಮ್ಡ್, ಅಬ್ಯೂಸ್ಡ್, ಬಿಟ್ರೇಯ್ಡ್ , ಕರಪ್ಟ್, ಡ್ರಾಮಾ, ಹೈಪೊಕ್ರಸಿ, ಇನ್ಕಾಪಿಟೆಂಟ್ ಶಬ್ದಗಳನ್ನು ಇನ್ನು ಮುಂದೆ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ(Lok Sabha and Rajya Sabha) ಬಳಸುವಂತಿಲ್ಲ. ಅವು ಅಸಂಸದೀಯ ಅಥವಾ ಶಾಸನಸಭೆಗೆ ಯೋಗ್ಯವಲ್ಲದ ಪದಗಳು(Unparliamentary word) ಎಂದು ಪರಿಗಣನೆಯಾಗುತ್ತವೆ ಎಂದು ಲೋಕಸಭೆ ಸಚಿವಾಲಯ ಹೊರಡಿಸಿರುವ ಹೊಸ ಕಿರುಹೊತ್ತಿಗೆಯಲ್ಲಿ ಸೂಚಿಸಲಾಗಿದೆ. 

ಲೋಕಸಭೆ ಸಚಿವಾಲಯ ಬಿಡುಗಡೆ ಮಾಡಿರುವ ಕಿರುಹೊತ್ತಿಗೆಯಲ್ಲಿ ಸಂಸದರು ಯಾವೆಲ್ಲ ಪದಗಳನ್ನು ಇನ್ನು ಮುಂದೆ ಸಂಸತ್ತಿನ ಒಳಗೆ ಸದನದಲ್ಲಿ ಬಳಸುವಂತಿಲ್ಲ, ಬಳಸಿದರೆ ಶಾಸನಸಭೆಗೆ ವಿರುದ್ಧವಾಗುತ್ತದೆ ಎಂದು ಪಟ್ಟಿಮಾಡಿದೆ. ಇದೇ ಜುಲೈ 18ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು ಅದಕ್ಕೂ ಮುನ್ನ ಈ ಕಿರುಹೊತ್ತಿಗೆ ಬಿಡುಗಡೆಯಾಗಿದೆ. ಅದರಲ್ಲಿ ಅನಾರ್ಕಿಸ್ಟ್, ಶಕುನಿ, ಡಿಕ್ಟಟೋರಿಯಲ್, ತಾನಶ, ತಾನಶಾಹಿ, ಜೈಚಂದ್, ವಿನಾಶ್ ಪುರುಷ್, ಖಲಿಸ್ತಾನಿ, ಖೂನ್ ಸೆ ಖೇತಿ ಪದಗಳನ್ನು ಸಂಸದರು ಉಪಯೋಗಿಸಿದರೆ ಕಡತದಿಂದ ತೆಗೆದುಹಾಕಲಾಗುತ್ತದೆ. 

ಇನ್ನು ಹೊತ್ತಿಗೆಯಲ್ಲಿ ದೊಹ್ರ ಚರಿತ್ರ, ನಿಕಮ್ಮ, ನೌಟಂಕಿ, ದಿಂಡೊರ ಪೀಟ್ನ, ಬೆಹ್ರಿ ಸರ್ಕಾರ್ ನಂತಹ ಶಬ್ದಗಳನ್ನು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ. 

ಕೆಲವು ಪದಗಳು ಮತ್ತು ಅಭಿವ್ಯಕ್ತಿಗಳು ದೇಶದ ವಿವಿಧ ಶಾಸಕಾಂಗ ಸಂಸ್ಥೆಗಳಲ್ಲಿ ಮತ್ತು ಕಾಮನ್‌ವೆಲ್ತ್ ಸಂಸತ್ತುಗಳಲ್ಲಿ ಅಧ್ಯಕ್ಷರು ಕಾಲಕಾಲಕ್ಕೆ ಅಸಂಸದೀಯವೆಂದು ಘೋಷಿಸುತ್ತಾರೆ, ಹೀಗೆ ಈ ಹೊತ್ತಿಗೆಯನ್ನು ಭವಿಷ್ಯದಲ್ಲಿ ಸಿದ್ಧ ಉಲ್ಲೇಖಕ್ಕಾಗಿ ಸಂಕಲಿಸಲಾಗಿದೆ. ಹೊತ್ತಿಗೆಯಲ್ಲಿ ಇದನ್ನು ಸೂಚಿಸಲಾದರೂ ಕೂಡ ರಾಜ್ಯಸಭಾಧ್ಯಕ್ಷರು ಮತ್ತು ಲೋಕಸಭಾ ಸ್ಪೀಕರ್ ಪದಗಳು ಮತ್ತು ಅಭಿವ್ಯಕ್ತಿಗಳನ್ನು ಬಳಸುವ ಮತ್ತು ತೆಗೆದುಹಾಕುವ ಪರಮಾಧಿಕಾರ ಹೊಂದಿರುತ್ತಾರೆ.

2021 ರಲ್ಲಿ ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಅಸಂಸದೀಯವೆಂದು ಘೋಷಿಸಲಾದ ಪದಗಳು ಮತ್ತು ಅಭಿವ್ಯಕ್ತಿಗಳ ಉಲ್ಲೇಖಗಳನ್ನು ಒಳಗೊಂಡಿದೆ, ಸಂಸತ್ತಿನ ಕಲಾಪಗಳ ಸಮಯದಲ್ಲಿ ಮಾತನಾಡುವ ಇತರ ಅಭಿವ್ಯಕ್ತಿಗಳ ಜೊತೆಯಲ್ಲಿ ಓದದ ಹೊರತು ಕೆಲವು ಶಬ್ದಗಳು ಅಸಂಸದೀಯವಾಗಿ ಕಾಣಿಸುವುದಿಲ್ಲ ಎಂದು ಉಲ್ಲೇಖ ಹೇಳುತ್ತದೆ. ಈ ಶಬ್ದಗಳ ಪಟ್ಟಿಯು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಎರಡೂ ಸದನಗಳಲ್ಲಿ ಸಂಸದರು ಸದನ ಪೀಠದ ವಿರುದ್ಧ ಮಾಡಿದ ಯಾವುದೇ ಆಗ್ರಹಗಳು, ಗದ್ದಲಗಳನ್ನು ಒಳಗೊಂಡಿರುತ್ತದೆ, ಅದನ್ನು ಅಸಂಸದೀಯವೆಂದು ಪರಿಗಣಿಸಿ ಸಂಸತ್ತಿನ ಕಡತಗಳಿಂದ ಹೊರಹಾಕಲಾಗುತ್ತದೆ.

ಲೋಕಸಭೆ ಸಚಿವಾಲಯ ಪಟ್ಟಿಮಾಡಿರುವ ಶಾಸನಸಭೆಗೆ ಯೋಗ್ಯವಲ್ಲದ ಇತರ ಇಂಗ್ಲಿಷ್ ಪದಗಳು: ಬ್ಲಡ್ ಶೆಡ್, ಬ್ಲಡಿ, ಬಿಟ್ರೇಯ್ಡ್, ಅಶೇಮ್ಡ್, ಅಬ್ಯೂಸ್ಡ್, ಚೀಟೆಡ್, ಚಮ್ಚಾ, ಚಮ್ಚಾಗಿರಿ, ಚೇಲಾಸ್, ಚೈಲ್ಡಿಶ್ ನೆಸ್, ಕರಪ್ಟ್, ಕವರ್ಡ್, ಕ್ರಿಮಿನಲ್ ಮತ್ತು ಕ್ರೊಕೊಡೈಲ್ ಟಿಯರ್ಸ್.

ಅಲ್ಲದೆ ಡಿಸ್ಗ್ರೇಸ್, ಡಾಂಕಿ, ಡ್ರಾಮಾ, ಐವಾಶ್, ಫಡ್ಜ್, ಹೂಲಿಗನಿಸಂ, ಹೈಪೊಕ್ರಸಿ, ಇನ್ ಕಾಂಪಿಟೆಂಟ್, ಮಿಸ್ಲೀಡ್, ಲೈ, ಅನ್ಟ್ರು ಶಬ್ದಗಳನ್ನು ಸಹ ಸಂಸದರು ಇನ್ನು ಮುಂದೆ ಸಂಸತ್ತಿನ ಒಳಗೆ ಬಳಸುವಂತಿಲ್ಲ.

ಹಿಂದಿ ಶಬ್ದಗಳು: ಅನಾರ್ಕಿಸ್ಟ್, ಗದ್ದರ್, ಗಿರ್ಗಿಟ್, ಗೂನ್ಸ್, ಗಡಿಯಾಲಿ ಅನ್ಸು, ಅಪಮಾನ್, ಅಸತ್ಯ, ಅಹಂಕಾರ್, ಕರಪ್ಟ್, ಕಾಲಾ ದಿನ್, ಕಾಲಾ ಬಜಾರಿ ಮತ್ತು ಖರೀದ್ ಫರೊಕ್ತ್.

ಇನ್ನು ದಂಗ, ದಲಾಲ್, ದಾದಾಗಿರಿ, ದೊಹ್ರ ಚರಿತ್ರ, ಬೇಚಾರ, ಬಾಬ್ ಕಟ್, ಲಾಲಿಪಪ್, ವಿಶ್ವಾಸ್ ಘಾತ್, ಸಂವೇದನ್ ಹೀನ್, ಫೂಲಿಶ್, ಪಿತ್ತು, ಬೆಹ್ರಿ ಸರ್ಕಾರ್ ಮತ್ತು ಸೆಕ್ಸುವಲ್ ಹೆರಾಸ್ ಮೆಂಟ್ ನ್ನು ಸಹ ಸಂಸದರು ಬಳಸುವಂತಿಲ್ಲ, ಒಂದು ವೇಳೆ ಬಳಸಿದರೆ ದಾಖಲೆಗಳಲ್ಲಿ ಉಳಿಸಿಕೊಳ್ಳದೆ ಕಡತದಿಂದ ತೆಗೆದುಹಾಕಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT