ಗೋ ಏರ್ ವಿಮಾನ 
ದೇಶ

ದೇಶದಲ್ಲಿ ಮತ್ತೊಂದು ವಿಮಾನ ತುರ್ತು ಭೂಸ್ಪರ್ಶ; ಆಗಸದಲ್ಲೇ ಬಿರುಕು ಬಿಟ್ಟ ಗೋ ಏರ್ ವಿಮಾನದ ಕಿಟಕಿ ಗಾಜು!

ದೇಶದಲ್ಲಿ ಮತ್ತೊಂದು ಪ್ರಯಾಣಿಕ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಗೋ ಏರ್ ಸಂಸ್ಥೆಯ ವಿಮಾನದ ಕಿಟಕಿ ಗಾಜು ಆಗಸದಲ್ಲೇ ಬಿರುಕು ಬಿಟ್ಟ ಪರಿಣಾಮ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ.

ನವದೆಹಲಿ: ದೇಶದಲ್ಲಿ ಮತ್ತೊಂದು ಪ್ರಯಾಣಿಕ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಗೋ ಏರ್ ಸಂಸ್ಥೆಯ ವಿಮಾನದ ಕಿಟಕಿ ಗಾಜು ಆಗಸದಲ್ಲೇ ಬಿರುಕು ಬಿಟ್ಟ ಪರಿಣಾಮ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದೆ ಎಂದು ತಿಳಿದುಬಂದಿದೆ.

ದೆಹಲಿ-ಗುವಾಹತಿ ನಡುವೆ ಸಂಚರಿಸುತ್ತಿದ್ದ ಗೋ ಏರ್ ಸಂಸ್ಥೆಯ ವಿಮಾನ ಸಂಖ್ಯೆ A320neo ವಿಮಾನದ ವಿಂಡ್‌ಶೀಲ್ಡ್ ಆಗಸದಲ್ಲಿರುವಾಗಲೇ ಬಿರುಕು ಬಿಟ್ಟಿದ್ದು, ಕೂಡಲೇ ಎಚ್ಚೆತ್ತ ಸಿಬ್ಬಂದಿ ವಿಮಾನವನ್ನು ಜೈಪುರಕ್ಕೆ ತಿರುಗಿಸಿ ತುರ್ತು ಭೂಸ್ಪರ್ಶ ಮಾಡಿದ್ದಾರೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಅಂತೆಯೇ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ದಿನಗಳಲ್ಲಿ ಗೋ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಮೂರನೇ ಘಟನೆ ಇದಾಗಿದ್ದು, ಮಂಗಳವಾರ, ಗೋ ಏರ್ ನ ಮುಂಬೈ-ಲೇಹ್ ಮತ್ತು ಶ್ರೀನಗರ-ದೆಹಲಿ ವಿಮಾನಗಳು ತಾಂತ್ರಿಕ ದೋಷ ಎದುರಿಸಿದ್ದವು.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT