ಸಂಜಯ್ ರಾವುತ್ 
ದೇಶ

12 ಬಂಡಾಯ ಸಂಸದರನ್ನು ಅನರ್ಹಗೊಳಿಸಿ: ಲೋಸಕಭೆ ಸ್ಪೀಕರ್ ಭೇಟಿ ಮಾಡಿದ ಸಂಜಯ್ ರಾವುತ್

ಸಂಜಯ್ ರಾವುತ್ ಗುರುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನ ಭೇಟಿಯಾಗಿ, ಏನನಾಥ್ ಶಿಂಧೆ ಬಣಕ್ಕೆ ಸೇರ್ಪಡೆಯಾಗಿರುವ ನಮ್ಮ ಪಕ್ಷದ 12 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿದ್ದಾರೆ.

ನವದೆಹಲಿ: ಸಂಜಯ್ ರಾವುತ್ ಗುರುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನ ಭೇಟಿಯಾಗಿ, ಏನನಾಥ್ ಶಿಂಧೆ ಬಣಕ್ಕೆ ಸೇರ್ಪಡೆಯಾಗಿರುವ ನಮ್ಮ ಪಕ್ಷದ 12 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿದ್ದಾರೆ.

'ಶಿವಸೇನೆಯ 12 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ನಾನು ಕೇಳಿದ್ದೇನೆ' ಎಂದು ಸ್ಪೀಕರ್‌ ಜೊತೆಗಿನ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

2019ರ ಚುನಾವಣೆಯ ಬಳಿಕ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ವಿನಾಯಕ್ ರಾವುತ್ ಅವರನ್ನು ಲೋಕಸಭೆಯ ಪಕ್ಷದ ನಾಯಕರನ್ನಾಗಿ ನೇಮಿಸಿದ್ದರು. ಸಂಜಯ್ ರಾವುತ್ ಅವರು ಮೇಲ್ಮನೆಯ ನಾಯಕರಾಗಿ ಆಯ್ಕೆಯಾಗಿದ್ದರು.

ಎರಡು ವಾರಗಳ ಹಿಂದೆ ಶಿವಸೇನೆಯ (ಉದ್ಧವ್‌ ಬಣ) 12 ಸಂಸದರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಸೇರ್ಪಡೆಯಾಗಿದ್ದರು. ಶಿಂದೆ ನೇತೃತ್ವದ 40 ಮಂದಿ ಶಿವಸೇನೆ ಶಾಸಕರು ‘ಮಹಾ ವಿಕಾಸ್ ಅಘಾಡಿ’ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ನಂತರ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು.

ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದ 12 ಶಿವಸೇನೆಯ ಸಂಸದರು, ರಾಹುಲ್ ಶೆವಾಲೆ ಅವರನ್ನು ಪಕ್ಷದ ನಾಯಕರನ್ನಾಗಿ ಘೋಷಿಸಿದ್ದರು. ಸದನದ ನಾಯಕರಾಗಿದ್ದ ವಿನಾಯಕ್ ರಾವುತ್ ಅವರ ಬದಲಿಗೆ ಶೆವಾಲೆ ಅವರೇ ನಮ್ಮ ನಾಯಕರು ಎಂದು ಹೇಳಿದ್ದರು. ಅಲ್ಲದೆ, ಐದು ಬಾರಿ ಸಂಸದರಾಗಿದ್ದ ಭಾವನಾ ಗಾವ್ಲಿ ಅವರನ್ನೇ ಪಕ್ಷದ ಮುಖ್ಯ ವಿಪ್ ಎಂದು ಹೇಳಿದ್ದರು.

ಸ್ಪೀಕರ್ ಕೂಡ ಶೆವಾಲೆ ಅವರನ್ನೇ ಲೋಕಸಭೆಯ ಶಿವಸೇನೆ ನಾಯಕ ಎಂದು ಗುರುತಿಸಿದ್ದರು.

Related Article

ಮತ ಕೇಳಲು ನಿಮ್ಮ ತಂದೆಯ ಫೋಟೊ ಬಳಸಿ: ಏಕನಾಥ್ ಶಿಂಧೆಗೆ ಉದ್ಧವ್ ಠಾಕ್ರೆ ಸವಾಲು

2024ರ ಲೋಕಸಭೆ ಚುನಾವಣೆಗೆ ಉದ್ಧವ್ ಠಾಕ್ರೆ ನೇತೃತ್ವ ಇಲ್ಲ: ಶಿವಸೇನೆ ಬಂಡಾಯ ಸಂಸದ

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಯನ್ನು ಶಿವಸೇನೆಯಿಂದ ವಜಾಗೊಳಿಸಿದ ಉದ್ಧವ್ ಠಾಕ್ರೆ

ಉದ್ಧವ್ ಠಾಕ್ರೆ ಕೆಳಗಿಳಿಸಿ, ಫಡ್ನವಿಸ್ 'ರೆಕ್ಕೆ' ಕತ್ತರಿಸಿದ ಬಿಜೆಪಿ: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದು ಕಮಲ ನಾಯಕರ 'ಟ್ರಿಕಿ' ಗೇಮ್!

ಉದ್ಧವ್ ಠಾಕ್ರೆ ಸರ್ಕಾರ ಪತನದೊಂದಿಗೆ ಮತ್ತೊಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್

ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್ ಗೆ ಶುಭ ಕೋರಿದ ಉದ್ಧವ್ ಠಾಕ್ರೆ

ಉದ್ಧವ್ ಠಾಕ್ರೆ ವಿಶ್ವಾಸ ಮತ ಯಾಚನೆ ಎದುರಿಸಬೇಕಿತ್ತು: ಕಾಂಗ್ರೆಸ್

'ಮಹಾ' ರಾಜಕೀಯ: ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜಿನಾಮೆ; ವಿಶೇಷ ಅಧಿವೇಶನ ಮುಂದೂಡಿಕೆ; ವಿಶ್ವಾಸಮತ ಯಾಚನೆ ಇಲ್ಲ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT