ದೇಶ

ನಾನು ಮಾತನಾಡಲು ಆರಂಭಿಸಿದರೆ ಭೂಕಂಪ ಆಗಲಿದೆ: ಮಹಾ ಸಿಎಂ ಶಿಂಧೆ

Lingaraj Badiger

ನವದೆಹಲಿ: ಶಿವಸೇನಾ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪರೋಕ್ಷ ಎಚ್ಚರಿಕೆ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ನಾನು ಮಾತನಾಡಲು ಆರಂಭಿಸಿದರೆ ಭೂಕಂಪ ಸಂಭವಿಸಲಿದೆ ಎಂದು ಶನಿವಾರ ಹೇಳಿದ್ದಾರೆ.

ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸುವ ಠಾಕ್ರೆ ಅವರ ನಿರ್ಧಾರವನ್ನು ಪ್ರಶ್ನಿಸಿದ ಶಿಂಧೆ, ಶಿವಸೇನಾ ನಾಯಕ ದಿವಂಗತ ಆನಂದ್ ದಿಘೆ ಅವರಿಗೆ ಏನಾಯಿತು ಎಂದು ತಿಳಿದಿದೆ ಎಂದು ಹೇಳಿದ್ದಾರೆ.

2002 ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಶಿವಸೇನಾ ನಾಯಕ ಮತ್ತು ಅವರ ಆಪ್ತ ದಿಘೆ ಅವರನ್ನು ಉಲ್ಲೇಖಿಸಿ "ಧರ್ಮವೀರ್'ನಲ್ಲಿ ಏನಾಯಿತು ಎಂಬುದಕ್ಕೆ ನಾನು ಸಾಕ್ಷಿಯಾಗಿದ್ದೆ" ಎಂದು ಶಿಂಧೆ ಹೇಳಿದ್ದಾರೆ.

ಇಂದು ಮಾಲೆಗಾಂವ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಸಿಎಂ ಶಿಂಧೆ, "ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಯನ್ನು ರಕ್ಷಿಸಲು ನಾನು ಬಂಡಾಯವೆದ್ದೆ ಎಂದಿದ್ದಾರೆ.

ಇಂಟರ್ವ್ಯೂ ಕೊಡಲು ಶುರು ಮಾಡಿದರೆ ಭೂಕಂಪ ಆಗುತ್ತೆ....ಕೆಲವರಂತೆ ನಾನು ಪ್ರತಿ ವರ್ಷವೂ ರಜೆಗೆಂದು ವಿದೇಶ ಪ್ರವಾಸ ಮಾಡೋದಿಲ್ಲ. ಶಿವಸೇನೆ ಮತ್ತು ಅದರ ಬೆಳವಣಿಗೆ ಮಾತ್ರ ನನ್ನ ಮನಸ್ಸಿನಲ್ಲಿತ್ತು'' ಎಂದು ಮಹಾ ಸಿಎಂ ಪರೋಕ್ಷವಾಗಿ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದಿವಂಗತ ಶಿವಸೇನಾ ಸಂಸ್ಥಾಪಕರ ಸೊಸೆ ಸ್ಮಿತಾ ಠಾಕ್ರೆ ಮತ್ತು ಅವರ ಹಿರಿಯ ಮೊಮ್ಮಗ ನಿಹಾರ್ ಠಾಕ್ರೆ ಅವರು ತಮಗೆ ಬೆಂಬಲ ನೀಡಿದ್ದಾರೆ ಎಂದು ಶಿಂಧೆ ತಿಳಿಸಿದ್ದಾರೆ. ಆದರೆ ಬಂಡಾಯ ಶಾಸಕರನ್ನು ದೇಶದ್ರೋಹಿಗಳು ಎಂದ ಉದ್ಧವ್ ಠಾಕ್ರೆ ಹೆಸರನ್ನುಎಲ್ಲೂ ಉಲ್ಲೇಖಿಸಲಿಲ್ಲ.

SCROLL FOR NEXT