ದೇಶ

ಕೇರಳ: ಮಂಕಿಪಾಕ್ಸ್ ಕಾಯಿಲೆ ಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿ ಸಾವು

Lingaraj Badiger

ತ್ರಿಶೂರ್: ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದ ಕೇರಳದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಕುರಂಜಿಯೂರ್ ಮೂಲದ ವ್ಯಕ್ತಿ ಶನಿವಾರ ಮೃತಪಟ್ಟಿದ್ದು, ಮೃತನ ಸ್ಯಾಂಪಲ್ಸ್‌ ಟೆಸ್ಟ್‌ನಲ್ಲಿ ಮಂಕಿಪಾಕ್ಸ್‌ ಸೋಂಕು ದೃಢಪಟ್ಟಿದೆ.

ದುಬೈನಿಂದ ಕೇರಳಕ್ಕೆ ವಾಪಸಾಗಿದ್ದ 22 ವರ್ಷದ ಈ ಯುವಕ ವಿದೇಶದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮಂಕಿಪಾಕ್ಸ್ ಪಾಸಿಟಿವ್ ಬಂದಿದ್ದು, ತೀವ್ರ ಸುಸ್ತು ಹಾಗೂ ಮೆದುಳು ಜ್ವರದಿಂದ ತ್ರಿಶೂರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಯುವಕನ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಮಂಕಿಪಾಕ್ಸ್ ಮಾರಣಾಂತಿಕ ರೋಗವಲ್ಲ ಎಂದು ಹೇಳಿದ್ದಾರೆ.

ಇದು ಕೇರಳದಲ್ಲಿ ವರದಿಯಾದ ಮೊದಲ ಮಂಕಿಪಾಕ್ಸ್‌ ಸಾವು. ಈ ಹಿಂದೆ ದೇಶದ ಮೊದಲ ಮೂರು ಮಂಕಿಪಾಕ್ಸ್ ಪ್ರಕರಣಗಳು ಕೇರಳದಲ್ಲಿ ವರದಿಯಾಗಿದ್ದವು. ಎಲ್ಲರೂ ಯುಎಇಯಿಂದ ಬಂದವರು. ನಂತರ ದೆಹಲಿಯಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು.

SCROLL FOR NEXT