ದೇಶ

ವಾಯುವ್ಯ ಭಾರತದಲ್ಲಿ ಜೂ.13 ವರೆಗೆ ಉಷ್ಣ ಹವೆ: ಐಎಂಡಿ 

Srinivas Rao BV

ನವದೆಹಲಿ: ವಾಯುವ್ಯ ಹಾಗೂ ಮಧ್ಯ ಭಾರತದಲ್ಲಿ ಉಷ್ಣಹವೆಯ ಪರಿಣಾಮ ಸ್ವಲ್ಪ ಮಟ್ಟಿಗೆ ತಗ್ಗಿದ್ದು, ಜೂ.13 ವರೆಗೂ ಉಷ್ಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
 
ಪಂಜಾಬ್, ಹರ್ಯಾಣ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಬಿಹಾರ ಹಾಗೂ ಜಾರ್ಖಂಡ್ ಗಳಲ್ಲಿ ಉಷ್ಣ ಹವೆ ಇನ್ನೂ 2 ದಿನಗಳಿಗೂ ಅಧಿಕ ಸಮಯ ಇರಲಿದೆ. 

ಶನಿವಾರದಂದು ಉಷ್ಣ ಹವೆ ದೇಶದ ಹಲವು ಭಾಗಗಳಲ್ಲಿದ್ದ ಪರಿಣಾಮ ರಾಜಸ್ಥಾನ, ಮಧ್ಯಪ್ರದೇಶ, ಹರ್ಯಾಣ, ದೆಹಲಿ, ಜಾರ್ಖಂಡ್, ಉತ್ತರ ಪ್ರದೇಶಗಳಲ್ಲಿ ಉಷ್ಣ ಹವೆ ಇತ್ತು  ಈ ಪೈಕಿ ಬಾಂದಾದಲ್ಲಿ ಅತಿ ಹೆಚ್ಚು ಅಂದರೆ 46.2 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿತ್ತು.

ಈ ರಾಜ್ಯಗಳ 22 ನಗರಗಳು, ಪಟ್ಟಣಗಳಲ್ಲಿ 44 ಕ್ಕಿಂತ ಅಧಿಕ ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಜೂ.02 ರಿಂದ ವಾಯುವ್ಯ ಭಾರತ ಹಾಗೂ ಮಧ್ಯ ಭಾರತದಲ್ಲಿ ತೀವ್ರವಾದ ಉಷ್ಣಾಂಶ ದಾಖಲಾಗಿದೆ. 

SCROLL FOR NEXT