ದೇಶ

ಫತೇಪುರ್: ಜಿಲ್ಲಾಧಿಕಾರಿ ಸಾಕಿದ ಹಸು ನೋಡಿಕೊಳ್ಳಲು 7 ವೈದ್ಯರ ನೇಮಕ!

Srinivas Rao BV

ಫತೇಪುರ್: ಉತ್ತರ ಪ್ರೇದಶದ ಫತೇಪುರ್ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸಾಕಿದ ಹಸುವಿನ ಚಿಕಿತ್ಸೆಗಾಗಿ 7 ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ಪಶುವೈದ್ಯಕೀಯ ಮುಖ್ಯಾಧಿಕಾರಿ ಹೊರಡಿಸಿರುವ ಸರ್ಕಾರಿ ಆದೇಶ ಇದೀಗ ವಾಟ್ಸಾಪ್ ಗ್ರೂಪ್‌ನಲ್ಲಿ ವೈರಲ್ ಆಗಿದ್ದು, ಸರ್ಕಾರಿ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಹೆಚ್ಚುವರಿ ಮುಖ್ಯ ಪಶುವೈದ್ಯಾಧಿಕಾರಿಯನ್ನು ಮಾತನಾಡಿಸಿದಾಗ, ಆದೇಶ ಹೊರಡಿಸಲಾಗಿದೆ ಎಂದು ಹೇಳುತ್ತಿದ್ದರೂ ಕೆಲ ಸರ್ಕಾರಿ ನೌಕರರು ಈ ಪತ್ರವನ್ನು ವಿನಾಕಾರಣ ವೈರಲ್ ಮಾಡಿದ್ದಾರೆ ಎಂದು ದೂರಿದ್ದಾರೆ.

ಫತೇಪುರ್ ಜಿಲ್ಲೆಯ ಡಿಎಂ ಅಪೂರ್ವ ದುಬೆ ಅವರ ನಿವಾಸದಲ್ಲಿ ಸಾಕಿದ್ದ ಹಸುವಿನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಪಶು ಇಲಾಖೆ 7 ವೈದ್ಯರ ಕರ್ತವ್ಯವನ್ನು ನಿಯೋಜನೆ ಮಾಡಲಾಗಿದೆ. ಸರ್ಕಾರದ ಆದೇಶವನ್ನು ವಾಟ್ಸಾಪ್ ಗ್ರೂಪ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ. ಅದೇ ಆದೇಶ ಪತ್ರವನ್ನು ಗುಂಪಿಗೆ ಸಂಬಂಧಿಸಿದ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಅದು ಸದ್ಯ ವೈರಲ್ ಆಗಿದೆ.

ಜಿಲ್ಲಾಧಿಕಾರಿ ಅಪೂರ್ವ ಅವರ ಹಸುವಿಗೆ ಚಿಕಿತ್ಸೆ ನೀಡಲು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪಶುವೈದ್ಯಾಧಿಕಾರಿಗಳ ಕರ್ತವ್ಯ ಎಂದು ಸರಕಾರಿ ಪತ್ರದಲ್ಲಿ ಬರೆಯಲಾಗಿದೆ. ಇದರೊಂದಿಗೆ ಪಶುವೈದ್ಯಾಧಿಕಾರಿ ಡಾ.ದಿನೇಶಕುಮಾರ ಸಂಗಾಂವ್ ಅವರು, ಈ ಸಂಬಂಧಿತ ವೈದ್ಯರೊಂದಿಗೆ ಸಮನ್ವಯದೊಂದಿಗೆ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಹಸುವನ್ನು ನೋಡಿದ ಬಗ್ಗೆ ಮುಖ್ಯ ವೈದ್ಯಾಧಿಕಾರಿಗೆ ದೂರವಾಣಿ ಮೂಲಕ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

ಅಪೂರ್ವ ಪತಿಯೂ ಕಾನ್ಪುರದ ಡಿಎಂ
ಡಿಎಂ ಅಪೂರ್ವ ದುಬೆ ಕಾನ್ಪುರದ ಹಾಲಿ ಡಿಎಂ ವಿಶಾಖ್ ಜಿ ಅಯ್ಯರ್ ಅವರ ಪತ್ನಿ. ಆದರೆ, ಕಳೆದ ಒಂದೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಐಎಎಸ್ ಅಪೂರ್ವ ಹೆಸರು ಯಾವುದೇ ವಿವಾದಕ್ಕೆ ಸಿಲುಕಿರಲಿಲ್ಲ. ಪ್ರಸ್ತುತ ಫತೇಪುರ್ ಡಿಎಂ ನಿವಾಸದಲ್ಲಿ 3 ಹಸುಗಳನ್ನು ಸಾಕಲಾಗುತ್ತಿದೆ. ಇವುಗಳನ್ನು ಆರೈಕೆಗೆ ವೈದ್ಯರನ್ನು ನೇಮಿಸಿರುವುದು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.

SCROLL FOR NEXT