ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಹಾರಾಷ್ಟ್ರದಲ್ಲಿ ಕೊರೋನಾ ಶೇ.36 ರಷ್ಟು ಹೆಚ್ಚಳ: ಇಂದು 4,024 ಪಾಸಿಟಿವ್ ಪ್ರಕರಣಗಳು ವರದಿ, ಇಬ್ಬರು ಸಾವು

ಮಹಾರಾಷ್ಟ್ರದಲ್ಲಿ ಕೊರೋನಾ ದಿಢೀರ್ ಹೆಚ್ಚಳವಾಗಿದ್ದು, ಬುಧವಾರ ಬರೋಬ್ಬರಿ 4,024 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ದಿನಕ್ಕಿಂತ ಪ್ರಕರಣ ಸಂಖ್ಯೆ ಶೇ. 36 ರಷ್ಟು ಏರಿಕೆಯಾಗಿದ್ದು, ಕೋವಿಡ್

ಕೋವಿಡ್-19 ಸಾಂದರ್ಭಿಕ ಚಿತ್ರ
Lingaraj Badiger
Updated On : 16 Jun 2022, 1:21 pm

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ದಿಢೀರ್ ಹೆಚ್ಚಳವಾಗಿದ್ದು, ಬುಧವಾರ ಬರೋಬ್ಬರಿ 4,024 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ದಿನಕ್ಕಿಂತ ಪ್ರಕರಣ ಸಂಖ್ಯೆ ಶೇ. 36 ರಷ್ಟು ಏರಿಕೆಯಾಗಿದ್ದು, ಕೋವಿಡ್ ಸಾಂಕ್ರಾಮಿಕದಿಂದ ಇಂದು ಇಬ್ಬರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಕೊರೊನಾ ವೈರಸ್‌ನ ಬಿಎ 5 ರೂಪಾಂತರದ ನಾಲ್ಕು ಹೊಸ ಪ್ರಕರಣಗಳು ಸಹ ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಮುಂಬೈ, ಥಾಣೆ, ನವಿ ಮುಂಬೈ ಮತ್ತು ಪುಣೆಯಿಂದ ಹೊಸ ರೂಪಾಂತರಿ ಬಿಎ5 ಪ್ರಕರಣಗಳು ವರದಿಯಾಗಿದ್ದು, ಎಲ್ಲಾ ನಾಲ್ವರು ರೋಗಿಗಳು 19 ರಿಂದ 36 ವರ್ಷ ವಯಸ್ಸಿನವರಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

Advertisement

ಇದನ್ನು ಓದಿ: ಕೊರೋನಾ ದಿಢೀರ್ ಹೆಚ್ಚಳ: ಇಂದು ಬೆಂಗಳೂರಿನಲ್ಲಿ 615 ಸೇರಿ ರಾಜ್ಯದಲ್ಲಿ 648 ಮಂದಿಗೆ ಪಾಸಿಟಿವ್; ಒಂದು ಸಾವು!

ರಾಜ್ಯದಲ್ಲಿ ಸಕ್ರಿಯ ಕೊರೋನಾ ಪ್ರಕರಣಗ ಸಂಖ್ಯೆ 19,261ಕ್ಕೆ ಏರಿಕೆಯಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಮಂಗಳವಾರ 2,956 ಪ್ರಕರಣಗಳು ಮತ್ತು ನಾಲ್ಕು ಸಾವುಗಳು ದಾಖಲಾಗಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement