ದೇಶ

ಸರ್ಕಾರ ವಿಫಲವಾದಾಗ, ಪ್ರತಿಪಕ್ಷಗಳು 'ಇಡಿ ಪರೀಕ್ಷೆ' ಪಾಸ್ ಮಾಡಬೇಕು: ಅಖಿಲೇಶ್ ಯಾದವ್

Lingaraj Badiger

ಲಖನೌ: "ಪ್ರಜಾಪ್ರಭುತ್ವದಲ್ಲಿ ಜಾರಿ ನಿರ್ದೇಶನಾಲಯವು ಒಂದು ಪರೀಕ್ಷೆ" ಎಂದಿರವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ರಾಜಕೀಯದಲ್ಲಿ ಸರ್ಕಾರ ವಿಫಲವಾದಾಗ ಪ್ರತಿಪಕ್ಷಗಳು "ಇಡಿ ಪರೀಕ್ಷೆಯನ್ನು" ಪಾಸ್ ಮಾಡಬೇಕಾಗುತ್ತದೆ ಎಂದು ಬುಧವಾರ ಹೇಳಿದ್ದಾರೆ.

"ಸಿದ್ಧತೆ" ಮಾಡಿಕೊಂಡಿರುವವರು ಯಾವುದೇ ಪರೀಕ್ಷೆಗೂ ಹೆದರುವ ಅಗತ್ಯವಿಲ್ಲ ಎಂದ ಮಾಜಿ ಸಿಎಂ, "ಇಡಿಯ ಅರ್ಥ ಈಗ 'ಪ್ರಜಾಪ್ರಭುತ್ವದಲ್ಲಿ ಒಂದು ಪರೀಕ್ಷೆ' ಆಗಿದೆ ಎಂದಿದ್ದಾರೆ.

"ರಾಜಕೀಯದಲ್ಲಿ, ಪ್ರತಿಪಕ್ಷಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಸರ್ಕಾರವು ವಿಫಲವಾದಾಗ, ಪ್ರತಿಪಕ್ಷಗಳಿಗೆ ಈ ಪರೀಕ್ಷೆಯನ್ನು ಪ್ರಕಟಿಸುತ್ತದೆ. ಉತ್ತಮವಾಗಿ ತಯಾರಿ ಮಾಡಿದವರು ಲಿಖಿತ-ಓದುವ ಪರೀಕ್ಷೆಗಳಿಗೆ ಅಥವಾ ಮೌಖಿಕ ಪರೀಕ್ಷೆಗಳಿಗೆ ಹೆದರುವುದಿಲ್ಲ ಮತ್ತು ನೀವು ಎಂದಿಗೂ ಭಯಪಡಬಾರದು" ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸತತ ಮೂರನೇ ದಿನವೂ ವಿಚಾರಣೆ  ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

SCROLL FOR NEXT