ಸಂಗ್ರಹ ಚಿತ್ರ 
ದೇಶ

ಅಯೋಧ್ಯೆ ರಾಮಮಂದಿರ ನಿರ್ಮಾಣ: ದೇಣಿಗೆ ನೀಡಿದ್ದ 22 ಕೋಟಿ ರೂ. ಮೊತ್ತದ ಚೆಕ್‌ಗಳು ಬೌನ್ಸ್!

ಶ್ರೀರಾಮ ಜನ್ಮಭೂಮಿ ಆವರಣದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ನೇತೃತ್ವದಲ್ಲಿ ನಡೆದ ದೇಣಿಗೆ ಅಭಿಯಾನದಲ್ಲಿ ದೇವಾಲಯದ ಟ್ರಸ್ಟ್‌ನ ಬೊಕ್ಕಸಕ್ಕೆ ಬರೋಬ್ಬರಿ 5,457 ಕೋಟಿ ರೂ. ಬಂದಿತ್ತು.

ಲಖನೌ: ಶ್ರೀರಾಮ ಜನ್ಮಭೂಮಿ ಆವರಣದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ನೇತೃತ್ವದಲ್ಲಿ ನಡೆದ ದೇಣಿಗೆ ಅಭಿಯಾನದಲ್ಲಿ ದೇವಾಲಯದ ಟ್ರಸ್ಟ್‌ನ ಬೊಕ್ಕಸಕ್ಕೆ ಬರೋಬ್ಬರಿ 5,457 ಕೋಟಿ ರೂ. ಬಂದಿತ್ತು. ಆದರೆ ಅಖಿಲ ಭಾರತ ಮಟ್ಟದಲ್ಲಿ ದೇಣಿಗೆ ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಿರುವ ತಂಡದ ತಾತ್ಕಾಲಿಕ ವರದಿಯು ಪ್ರಕಾರ 22 ಕೋಟಿ ಮೌಲ್ಯದ ಚೆಕ್‌ಗಳು ಬೌನ್ಸ್ ಆಗಿವೆ. 

ಮತ್ತೊಂದೆಡೆ, ಟ್ರಸ್ಟ್ ಖಾತೆಗಳ ಜಿಲ್ಲಾವಾರು ಲೆಕ್ಕಪರಿಶೋಧನೆ ನಡೆಯುತ್ತಿರುವುದರಿಂದ ಇದುವರೆಗೆ ಸಂಗ್ರಹಿಸಲಾದ ಒಟ್ಟು ಮೊತ್ತದ ಅಂಕಿಅಂಶವು ತಾತ್ಕಾಲಿಕವಾಗಿದೆ. ಟ್ರಸ್ಟ್ ಮೂಲಗಳ ಪ್ರಕಾರ, ಬೌನ್ಸ್ ಆಗಿರುವ ಚೆಕ್‌ಗಳನ್ನು ಪ್ರತ್ಯೇಕಿಸಿ ಹೊಸ ಆಡಿಟ್ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

ಇನ್ನು ಚೆಕ್‌ಗಳು ಬೌನ್ಸ್ ಆದ ಕಾರಣ ತಿಳಿದುಕೊಳ್ಳಲು ಪರಿಶೀಲಿಸಲಾಗುತ್ತಿದೆ. 'ತಾಂತ್ರಿಕ ಕಾರಣಗಳಿಂದಾಗಿ ಬೌನ್ಸ್ ಆಗಿರುವ ಚೆಕ್‌ಗಳನ್ನು ಸಂಬಂಧಪಟ್ಟ ಬ್ಯಾಂಕ್‌ನ ಒಪ್ಪಿಗೆ ಪಡೆದ ನಂತರ ಮತ್ತೆ ಪ್ರತಿನಿಧಿಸಲಾಗುತ್ತದೆ' ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದರು.

2021ರ ಜನವರಿ 14ರಂದು ದೇವಾಲಯದ ಟ್ರಸ್ಟ್ ಮತ್ತು VHP 44 ದಿನಗಳ ಕಾಲ ನಿಧಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಾಯಿತು ಎಂಬುದನ್ನು ಸ್ಮರಿಸಬಹುದು. ಆರಂಭಿಕ ಅಭಿಯಾನವೂ 2021ರ ಫೆಬ್ರವರಿ 28ರಂದು ಮುಕ್ತಾಯವಾಗಿದ್ದು 2,100 ಕೋಟಿ ರೂಪಾಯಿಗಳ ಸಂಗ್ರಹವಾಗಿತ್ತು.

ಅಭಿಯಾನ ಪ್ರಾರಂಭಕ್ಕೂ ಮುನ್ನ ದೇವಾಲಯದ ಟ್ರಸ್ಟ್ ರಾಮಮಂದಿರ ನಿರ್ಮಾಣಕ್ಕಾಗಿ 1100 ಕೋಟಿ ರೂ. ಅಂದಾಜಿಸಲಾಗಿತ್ತು. ಮಂದಿರವನ್ನು 300-400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಅಂದಾಜಿಸಲಾಗಿತ್ತು. ಕಳೆದ ವರ್ಷ ಜೂನ್‌ವರೆಗೆ ದೇವಾಲಯದ ಟ್ರಸ್ಟ್ ತನ್ನ ಖಾತೆಗೆ ಜನರು ದೇಣಿಗೆ ಮೂಲಕ ಒಟ್ಟು 3,200 ಕೋಟಿ ರೂ. ನೀಡಿದ್ದಾರೆ.

ಪ್ರಸ್ತುತ, ದೇಣಿಗೆ ಮೇಲಿನ ನಿಗಾ ತಂಡದ ವರದಿಯ ಪ್ರಕಾರ, ಒಟ್ಟು 5,400 ಕೋಟಿ ರೂ.ಗಿಂತ ಹೆಚ್ಚಿನ ಸಂಗ್ರಹವಾಗಿದೆ. 2,235.97 ಕೋಟಿ ರೂ.ಗಳನ್ನು ಕೂಪನ್ ಮತ್ತು ರಸೀದಿಗಳ ಮೂಲಕ ಸ್ವೀಕರಿಸಲಾಗಿದೆ. 2753.97 ಡಿಜಿಟಲ್ ಮಾಧ್ಯಮದ ಮೂಲಕ ಸಂಗ್ರಹಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

SCROLL FOR NEXT