ದೇಶ

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ: ಸರ್ಕಾರ ಪತನದ ಸುಳಿವು ನೀಡಿದ ಸಂಜಯ್ ರಾವತ್

Manjula VN

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿರುವಂತೆಯೇ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಪತನಗೊಳ್ಳುವ ಸುಳಿವನ್ನು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬುಧವಾರ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಂಜಯ್ ರಾವತ್ ಅವರು, ಪ್ರಸ್ತುತದ ಮಹಾರಾಷ್ಟ್ರ ರಾಜ್ಯದ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುವಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಏಕ್​ನಾಥ್ ಸಿಂದೆ ಜೊತೆ ಇಂದು ಬೆಳಗ್ಗೆ ಮಾತನಾಡಿದೆ. ಯಾರೆಲ್ಲಾ ಹೊರಗೆ ಹೋಗಿದ್ದಾರೋ ಅವರೆಲ್ಲಾ ಶಿವಸೇನೆಯ ಸೈನಿಕರು. ಅವರೆಲ್ಲ ಶಿವಸೇನೆ ಜೊತೆ ಉಳಿಯಲು ಬಯಸುತ್ತಾರೆ. ನಮ್ಮಲ್ಲಿ ಕೆಲವು ತಪ್ಪು ತಿಳುವಳಿಕೆಯಿಂದ ಸರ್ಕಾರದಲ್ಲಿ ಹೀಗೆ ಆಗಿರಬಹುದು. ಇದಕ್ಕೂ ಮೇಲಾಗಿ ಶಿಂದೆ ನನ್ನ ಬಳಿ ಯಾವುದೇ ಬೇಡಿಕೆಯನ್ನ ಇಟ್ಟಿಲ್ಲ.

ಉದ್ಧವ್ ಠಾಕ್ರೆ ಕಾಂಗ್ರೆಸ್​ ಹಾಗೂ ಎನ್​ಸಿಪಿ ಜೊತೆ ಕೈಜೋಡಿಸಿರುವ ಬಗ್ಗೆ ಮಾತನಾಡಿದರು. ನಮ್ಮ ಹೋರಾಟವನ್ನ ಮುಂದುವರಿಸುತ್ತೇವೆ. ಇಲ್ಲಿ ಸಂಭವಿಸುವ ಕೆಟ್ಟ ವಿಚಾರ ಏನು? ನಾವು ಅಧಿಕಾರ ಕಳೆದುಕೊಳ್ಳಬಹುದು. ಮತ್ತೆ ಪಡೆಯಬಹುದು. ಅಧಿಕಾರಕ್ಕಿಂತ ನಮಗೆ ಪಕ್ಷದ ಘನತೆಯೇ ಮುಖ್ಯ ಎಂದು ಹೇಳಿದ್ದರು.

SCROLL FOR NEXT