ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕೋವಿಡ್-19: ದೇಶದಲ್ಲಿ 17,336 ಹೊಸ ಪ್ರಕರಣ, 13 ಮಂದಿ ಸಾವು

ದೇಶದಲ್ಲಿ ಮತ್ತೆ ಕೊರೋನಾ ಸೋಂಕು ನಿನ್ನೆಗಿಂತ ಕಳೆದ 24 ಗಂಟೆಗಳಲ್ಲಿ ಸ್ವಲ್ಪ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 17,336 ಸೋಂಕಿತರು ಪತ್ತೆಯಾಗಿದ್ದು 13 ಮಂದಿ ಸಾವನ್ನಪ್ಪಿದ್ದಾರೆ, ಕಳೆದ 124 ದಿನಗಳಲ್ಲಿ ಅತ್ಯಧಿಕವಾಗಿದೆ. ಮೊನ್ನೆ 13,313 ಪ್ರಕರಣ ವರದಿಯಾಗಿದ್ದವು.

ಸಾಂದರ್ಭಿಕ ಚಿತ್ರ
Sumana Upadhyaya
Updated On : 24 Jun 2022, 1:44 pm

ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಸೋಂಕು ನಿನ್ನೆಗಿಂತ ಕಳೆದ 24 ಗಂಟೆಗಳಲ್ಲಿ ಸ್ವಲ್ಪ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 17,336 ಸೋಂಕಿತರು ಪತ್ತೆಯಾಗಿದ್ದು 13 ಮಂದಿ ಸಾವನ್ನಪ್ಪಿದ್ದಾರೆ, ಕಳೆದ 124 ದಿನಗಳಲ್ಲಿ ಅತ್ಯಧಿಕವಾಗಿದೆ. ಮೊನ್ನೆ 13,313 ಪ್ರಕರಣ ವರದಿಯಾಗಿದ್ದವು. 

ಕಳೆದ 24 ಗಂಟೆಗಳಲ್ಲಿ 13,029 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಗುಣಮುಖರಾದವರ ಸಂಖ್ಯೆ 4,27,49,056ಕ್ಕೆ ಏರಿಕೆಯಾಗಿದೆ. 

ಪ್ರಸ್ತುತ ದೇಶದಲ್ಲಿ 88 ಸಾವಿರದ 284 ಮಂದಿ ಸಕ್ರಿಯ ಕೋವಿಡ್ ಸೋಂಕಿತರಿದ್ದು, ಸಕ್ರಿಯ ಕೇಸುಗಳ ಪ್ರಮಾಣ ಶೇಕಡಾ 0.20ರಷ್ಟಿದೆ.ಗುಣಮುಖ ಹೊಂದುತ್ತಿರುವವರ ಪ್ರಮಾಣ ಶೇಕಡಾ 98.59ರಷ್ಟಿದೆ.ಇದುವರೆಗೆ ಸೋಂಕಿನಿಂದ ದೇಶದಲ್ಲಿ 5 ಲಕ್ಷದ 24 ಸಾವಿರದ 954 ಮಂದಿ ಬಲಿಯಾಗಿದ್ದಾರೆ. 

Advertisement

Advertisement

ಇದನ್ನೂ ಓದಿ: ಕೋವಿಡ್-19: ಕಳೆದ 24 ಗಂಟೆಗಳಲ್ಲಿ 13,313 ಹೊಸ ಪ್ರಕರಣ, 10,972 ಮಂದಿ ಚೇತರಿಕೆ 38 ಮಂದಿ ಸಾವು

ದೇಶದಲ್ಲಿ ಒಟ್ಟಾರೆ 196 ಕೋಟಿಯ 77 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ದೇಶದ ನಾಗರಿಕರಿಗೆ ನೀಡಲಾಗಿದೆ. ಕೊರೋನಾ ಸೋಂಕು ಬಂದ ಮೇಲೆ ದೇಶದಲ್ಲಿ 85.98 ಕೋಟಿ ಮಂದಿಗೆ ಕೋವಿಡ್  ಪರೀಕ್ಷೆ ಮಾಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ 4,01,649 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement