ದೇಶ

ಅರವಿಂದ್ ಕೇಜ್ರಿವಾಲ್ ಪ್ರಧಾನಿಯಾಗುತ್ತಾರೆ, ಈಗ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಶಕ್ತಿ; ಪಂಜಾಬ್ ಮುನ್ನಡೆ ಕುರಿತು ಆಪ್

Srinivas Rao BV

ನವದೆಹಲಿ: ಪಂಜಾಬ್ ನಲ್ಲಿ 117 ಸ್ಥಾನಗಳ ಪೈಕಿ 90 ಸ್ಥಾನಗಳನ್ನು ಗಳಿಸಿರುವ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತ ಪಡೆದಿದ್ದು ಅಧಿಕಾರಕ್ಕೇರಿದೆ.

ಈ ನಡುವೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡ, ಪಂಜಾಬ್ ಗೆಲುವಿನ ಮೂಲಕ ಆಮ್ ಆದ್ಮಿ ಪಕ್ಷ ಈಗ ರಾಷ್ಟ್ರೀಯ ಪಕ್ಷವಾಗಿದೆ. ದೇಶದ ಅತಿ ದೊಡ್ಡ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಗೆ ಶೀಘ್ರವೇ ಪರ್ಯಾಯವಾಗಲಿದೆ ಎಂದು ಹೇಳಿದ್ದಾರೆ. 

ಇದು ಆಮ್ ಆದ್ಮಿ ಪಕ್ಷಕ್ಕೆ ಅತ್ಯಂತ ಮಹತ್ವದ ದಿನ, ಈಗ ನಾವು ಪ್ರಾದೇಶಿಕ ಪಕ್ಷವಲ್ಲ. ಭಗವಂತ ನಮಗೆ ಹಾಗೂ ಅರವಿಂದ್ ಕೇಜ್ರಿವಾಲ್ ಗೆ ಒಳಿತನ್ನು ಮಾಡಲಿ, ಮುಂದೊಂದು ದಿನ ಅರವಿಂದ್ ಕೇಜ್ರಿವಾಲ್ ದೇಶವನ್ನು ಮುನ್ನಡೆಸುವಂತಾಗಲಿ ಎಂದು ರಾಘವ್ ಚಡ್ಡ ಹೇಳಿದ್ದಾರೆ. 

ಆಮ್ ಅದ್ಮಿ ಪಕ್ಷ 2012 ರಲ್ಲಿ ಸ್ಥಾಪನೆಗೊಂಡು ಎರಡು ರಾಜ್ಯಗಳನ್ನು ಗೆದ್ದಿರುವುದಕ್ಕೆ ಹೋಲಿಕೆ ಮಾಡಿಕೊಂಡರೆ ಬಿಜೆಪಿ ತನ್ನ ಸ್ಥಾಪನೆಯ ವರ್ಷದಿಂದ ಎರಡು ರಾಜ್ಯಗಳನ್ನು ಗೆಲ್ಲುವುದಕ್ಕೆ ಬಹಳಷ್ಟು ಸಮಯ ತೆಗೆದುಕೊಂಡಿತ್ತು ಎಂದು ರಾಘವ್ ಚಡ್ಡಾ ಹೇಳಿದ್ದು ಆಮ್ ಆದ್ಮಿ ಪಕ್ಷ ಪಂಜಾಬ್ ನ ಆರ್ಥಿಕತೆ ಹಾಗೂ ಗತವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ ನೀಲನಕ್ಷೆ ತಯಾರಿಸಲಿದೆ ಎಂದು ಹೇಳಿದ್ದಾರೆ. "ಗೆಲುವು ನಮಗೆ ಏನೆಂಬುದನ್ನು ನಾವು ಅರಿತುಕೊಂಡಿದ್ದೇವೆ. ಇದರ ಬೆಲೆ ಏನೆಂಬುದು ಅರ್ಥವಾಗಿದೆ" ಎಂದು ರಾಘವ್ ಚಡ್ಡಾ ಹೇಳಿದ್ದಾರೆ. 

SCROLL FOR NEXT