ಕೊಯಮತ್ತೂರಿನಲ್ಲಿ ಸ್ಫೋಟಗೊಂಡಿದ್ದ ಕಾರು 
ದೇಶ

ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ಪೊಲೀಸರಿಂದ ನಗರದಲ್ಲಿ ಮನೆ ಮನೆ ಸಮೀಕ್ಷೆ ಪ್ರಾರಂಭ

ಕೊಯಮತ್ತೂರು ಕಾರು ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕರ ನಂಟು ಬಹಿರಂಗವಾದ ನಂತರ ಕೊಯಮತ್ತೂರು ಪೊಲೀಸರು ನಗರದ ನಿವಾಸಿಗಳ ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿದ್ದಾರೆ.

ಚೆನ್ನೈ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದಕರ ನಂಟು ಬಹಿರಂಗವಾದ ನಂತರ ಕೊಯಮತ್ತೂರು ಪೊಲೀಸರು ನಗರದ ನಿವಾಸಿಗಳ ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿದ್ದಾರೆ.

ಸ್ಫೋಟದಲ್ಲಿ ಸಾವಿಗೀಡಾದ ಜಮೀಶಾ ಮುಬಿನ್ ಅವರ ನಿವಾಸದ ಮೇಲೆ ನಡೆಸಿದ ದಾಳಿಯಲ್ಲಿ, ತಮಿಳುನಾಡು ಪೊಲೀಸರು ಹಲವಾರು ದೋಷಾರೋಪಣೆಯ ದಾಖಲೆಗಳನ್ನು ಕಂಡುಕೊಂಡಿದ್ದಾರೆ, ಕೆಲವು ಐಸಿಸ್ ಸಿದ್ಧಾಂತಗಳು ಪತ್ತೆಯಾಗಿವೆ.

ಗುರುತಿನ ಪುರಾವೆ, ಕುಟುಂಬದ ವಿವರಗಳು, ಮೊಬೈಲ್ ಸಂಖ್ಯೆಗಳು, ಶಾಶ್ವತ ವಿಳಾಸ, ಹಿಂದಿನ ವಿಳಾಸ ಮತ್ತು ಕೆಲಸದ ಸ್ವರೂಪದ ವಿವರಗಳನ್ನು ನೀಡಲು ಪೊಲೀಸರು ಈಗಾಗಲೇ ಕಟ್ಟಡಗಳ ಮಾಲೀಕರಿಗೆ ತಿಳಿಸಿದ್ದಾರೆ.

ಕೊಯಮತ್ತೂರು ಪೊಲೀಸರು ನಗರದ ನಿವಾಸಿಗಳ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬಾಡಿಗೆದಾರರು ಕಟ್ಟಡಕ್ಕೆ ಬಂದ ಬಳಿಕ ಅವರ ವಿವರಗಳನ್ನು ಪೊಲೀಸರಿಗೆ ಹಾಜರುಪಡಿಸಬೇಕು ಎಂದು ಪೊಲೀಸರು ಈಗಾಗಲೇ ಮನೆ ಮಾಲೀಕರಿಗೆ ತಿಳಿಸಿದ್ದಾರೆ. ಬಾಡಿಗೆದಾರರು ನಿವೇಶನವನ್ನು ಖಾಲಿ ಮಾಡಿದಾಗಲೂ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಬೇಕಾಗುತ್ತದೆ.

ಮೃತ ಮುಬಿನ್ ಕಳೆದ ಒಂದು ತಿಂಗಳಿನಿಂದ ಸಂಗಮೇಶ್ವರ ದೇವಸ್ಥಾನದ ಬಳಿ ಕೊಟ್ಟೈಮೇಡುವಿನ ಬೀದಿಯಲ್ಲಿರುವ ಎಚ್‌ಎಂಪಿಆರ್‌ನಲ್ಲಿರುವ ವಸತಿ ಸಂಕೀರ್ಣದ ಮೊದಲ ಮಹಡಿಯಲ್ಲಿ ವಾಸವಾಗಿದ್ದ.
ಗುಪ್ತಚರ ವರದಿಯು ಪೊಲೀಸ್ ಕಣ್ಗಾವಲಿನಲ್ಲಿರಬೇಕಾದ 96 ವ್ಯಕ್ತಿಗಳ ಪಟ್ಟಿಯನ್ನು ಹೊಂದಿದ್ದು, ಇದರಲ್ಲಿ ಮುಬಿನ್ 89ನೇ ಸ್ಥಾನವನ್ನು ಹೊಂದಿದ್ದಾರೆ. ಮುಬಿನ್‌ನ ನಿವಾಸದ ವಿಳಾಸವು ಆಗ ವಿನ್ಸೆಂಟ್ ರಸ್ತೆಯಾಗಿತ್ತು. ಆದರೆ, ಒಂದು ತಿಂಗಳಲ್ಲಿ ಆತ H.M.P.R ಬೀದಿಗೆ ಸ್ಥಳಾಂತರಗೊಂಡಿದ್ದಾನೆ.

ಹೀಗಾಗಿ ಕೊಯಮತ್ತೂರು ಪೊಲೀಸರು ಮನೆ ಮನೆ ಸಮೀಕ್ಷೆ ನಡೆಸಲು ಮತ್ತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಮ್ಮ ಬಾಡಿಗೆದಾರರ ವಿವರಗಳನ್ನು ಸಲ್ಲಿಸಲು ಕಟ್ಟಡಗಳ ಮಾಲೀಕರಿಗೆ ಸೂಚಿಸಲು ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT