ದೇಶ

ತಗ್ಗಿದ ಬೇಡಿಕೆ, 2023ರ ಆರಂಭದಲ್ಲಿ 50 ಮಿಲಿಯನ್ ಡೋಸ್‌ ಕೋವಾಕ್ಸಿನ್‌ ಲಸಿಕೆ ಎಕ್ಸ್ ಪೈರಿ

Lingaraj Badiger

ಹೈದರಾಬಾದ್: ದೇಶದಲ್ಲಿ ಕೊರೋನಾ ವೈರಸ್ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಗೆ ಬೇಡಿಕೆ ತಗ್ಗಿದ್ದು, ಇದರ ಪರಿಣಾಮ ಭಾರತ್ ಬಯೋಟೆಕ್‌ನ 50 ಮಿಲಿಯನ್ ಡೋಸ್ ಕೋವಾಕ್ಸಿನ್ ಲಸಿಕೆಯ ಅವಧಿ ಮುಂದಿನ ವರ್ಷದ ಆರಂಭದಲ್ಲಿ ಮುಗಿಯಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಬೇಡಿಕೆಯ ಕೊರತೆಯಿಂದಾಗಿ ಕೋವಾಕ್ಸಿನ್-ಎರಡು ಡೋಸ್ ಲಸಿಕೆ ಉತ್ಪಾದನೆಯನ್ನು ಈ ವರ್ಷದ ಆರಂಭದಲ್ಲಿ ಭಾರತ್ ಬಯೋಟೆಕ್ ಸ್ಥಗಿತಗೊಳಿಸಿತ್ತು. ಆದರೂ ವಾರ್ಷಿಕವಾಗಿ 100 ಕೋಟಿ ಡೋಸ್ ತಯಾರಿಸುವ ಸಾಮರ್ಥ್ಯ ಹೊಂದಿರುವ ಭಾರತ್ ಬಯೋಟೆಕ್ ಬಳಿ 20 ಕೋಟಿ ಡೋಸ್ ಲಸಿಕೆ ದಸ್ತಾನು ಇದ್ದು, ಈ ಪೈಕಿ ಐದು ಕೋಟಿ ಡೋಸ್ ಗಳ ಅವಧಿ ಶೀಘ್ರದಲ್ಲೇ ಮುಗಿಯಲಿದೆ.

"2023 ರ ಆರಂಭದಲ್ಲಿ ಬಾಟಲುಗಳಲ್ಲಿನ ಕೋವಾಕ್ಸಿನ್ ಡೋಸ್‌ಗಳ ಅವಧಿ ಮುಗಿಯಲಿದೆ, ಇದರಿಂದಾಗಿ ಕಂಪನಿಗೆ ನಷ್ಟ ಉಂಟಾಗುತ್ತದೆ" ಎಂದು ಮೂಲಗಳು ತಿಳಿಸಿವೆ. ಆದರೆ ನಷ್ಟದ ಪ್ರಮಾಣ ಎಷ್ಟು ಎನ್ನುವುದರ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಶನಿವಾರ 1,082 ಹೊಸ COVID-19 ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 15,200 ಕ್ಕೆ ಇಳಿದಿದೆ.

SCROLL FOR NEXT