ದೇಶ

ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿಗೆ 95ನೇ ಹುಟ್ಟುಹಬ್ಬ: ಪ್ರಧಾನಿ ಸೇರಿ ಬಿಜೆಪಿ ನಾಯಕರಿಂದ ಶುಭಾಶಯ

Sumana Upadhyaya

ನವದೆಹಲಿ: ಇಂದು ಅಕ್ಟೋಬರ್ 8, ಮಾಜಿ ಉಪ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ(L K Advani birthday)ಯವರ 95ನೇ ಜನ್ಮದಿನ. 

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಅವರ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ನೀಡಿ ಶುಭಾಶಯ ತಿಳಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಭೇಟಿ ನೀಡಿ ಶುಭಾಶಯ ತಿಳಿಸಿದ್ದಾರೆ.

ಕೇಂದ್ರ ಸಚಿವರು, ಹಲವು ಬಿಜೆಪಿ ನಾಯಕರು ಸೋಷಿಯಲ್ ಮೀಡಿಯಾ ಮೂಲಕ ಹಿರಿಯ ನಾಯಕನಿಗೆ ಶುಭ ಕೋರಿದ್ದಾರೆ.1927ರ ನವೆಂಬರ್ 8ರಂದು ಕರಾಚಿಯಲ್ಲಿ ಜನಿಸಿದ ಅಡ್ವಾಣಿಯವರು 1998ರಿಂದ 2004ರವರೆಗೆ ಎನ್ ಡಿಎ ಮೈತ್ರಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು. ನಂತರ 2002ರಿಂದ 2004ರವರೆಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಪಕ್ಷದ ಸ್ಥಾಪಕರಲ್ಲೊಬ್ಬರು ಅಡ್ವಾಣಿಯವರು. 

ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ಎಸ್)ಮೂಲಕ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದ ಅಡ್ವಾಣಿಯವರು ದೇಶದ ಅಗ್ರಮಾನ್ಯ ರಾಜಕೀಯ ನಾಯಕರಲ್ಲೊಬ್ಬರು. 2015ರಲ್ಲಿ ಕೇಂದ್ರ ಸರ್ಕಾರ ಅವರಿಗೆ ದೇಶದ ಎರಡನೇ ಅತಿದೊಡ್ಡ ನಾಗರಿಕ ಸನ್ಮಾನವಾದ ಪದ್ಮ ವಿಭೂಷಣ ನೀಡಿ ಗೌರವಿಸಿತ್ತು.

SCROLL FOR NEXT